ಮಡಿಕೇರಿ, ಮೇ ೧೦: ಗಾಳಿಬೀಡು ಗ್ರಾಮದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ತಾ. ೧೨ ರಂದು (ನಾಳೆ) ಹಾಗೂ ತಾ. ೧೩ ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಕೆದಿಲಾಯ ತಂತ್ರಿಗಳು ಪೂಜೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ತಾ. ೧೨ ರಂದು ಸಂಜೆ ೬ ಗಂಟೆಯಿAದ ರಾತ್ರಿ ೯ ಗಂಟೆಯವರೆಗೆ ಪುಣ್ಯಾಹವಾಚನ, ಸ್ಥಳ ಶುದ್ಧಿ, ಸಪ್ತ ಶುದ್ಧಿ, ರಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಮಹಾಪೂಜೆ ಜರುಗಲಿದೆ. ತಾ. ೧೩ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ಐಕ್ಯಮತ್ಯ ಹೋಮ, ಪ್ರಾಯಶ್ಚಿತ ಹೋಮ, ಕಲಶ ಪೂಜೆ, ಅಧಿವಾಸ ಹೋಮ, ಕಲಶಾಭಿಷೇಕ, ಮುಕುಟ ಪ್ರತಿಷ್ಠೆ ಹಾಗೂ ಮಹಾಪೂಜೆ ನೆರವೇರಲಿದೆ.