ಗೋಣಿಕೊಪ್ಪ ವರದಿ, ಮೇ ೧೧ : ರಾಜ್ಯ ಶೊಬುಕೈ ಶಿಟಾರಿಯೋ ಕರಾಟೆ ಫೆಡರೇಷನ್ ಇಂಡಿಯಾ ವತಿಯಿಂದ ಮೈಸೂರು ವಿ. ಎನ್. ಯೋಧ ಮೆರಿಟಲ್ ಆರ್ಟ್ ಅಕಾಡೆಮಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ ೭೫ ಕೆ. ಜಿ. ವಿಭಾಗದಲ್ಲಿ ಕೊಡಗಿನ ಉಳುವಂಗಡ ಅಮಿತ್ ಬೋಪಣ್ಣ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಟಿ. ಶೆಟ್ಟಿಗೇರಿ ಗ್ರಾಮದ ಉಳುವಂಗಡ ಉದಯ, ಕಾವೇರಿ ದಂಪತಿ ಪುತ್ರ. ಕಳ್ಳಿಕಂಡ ಕಿಶೋರ್, ಕೊಡಿಯಂಡ ಕಾರ್ತಿಕ್ ದೇವಯ್ಯ ತರಬೇತಿ ನೀಡಿದ್ದರು.