ಸಿದ್ದಾಪುರ, ಮೇ ೧೧: ನೆಲ್ಲಿಹುದಿಕೇರಿ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ೧೫ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆದರೆ ಒಂದು ಗುಂಪಿನ ಮೂರು ಕಾಡಾನೆಗಳು ಕಾಡಿಗೆ ತೆರಳಲು ಹಿಂದೇಟು ಹಾಕಿದ್ದು, ಕಾಫಿ ತೋಟಗಳಿಂದ ಕದಲುತ್ತಿಲ್ಲ. ನೆಲ್ಲಿಹುದಿಕೇರಿಯ ಸುತ್ತಮುತ್ತಲಿನ ಪ್ರದೇಶಗಳಾದ ಅರೆಕಾಡು, ಕಾಟಿಬಾಣೆ, ಅತ್ತಿಮಂಗಲ, ಅಭ್ಯತ್ಮಂಗಲ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಾ, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ವಾಹನಗಳ ಮೇಲೆ ದಾಳಿ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ೨೦ ಮಂದಿ ಸಿಬ್ಬಂದಿಗಳು ಸೇರಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದರು.
(ಮೊದಲ ಪುಟದಿಂದ) ಬುಧವಾರದ ಕಾರ್ಯಾ ಚರಣೆಯಲ್ಲಿ ಕಾಡಾನೆಗಳು ಬೇರೆ ಬೇರೆ ಗುಂಪು ಗಳಾಗಿ ಬೇರ್ಪಟ್ಟವು. ಈ ಪೈಕಿ ೩ ಕಾಡಾನೆಗಳಿರುವ ಗುಂಪು ಮಾತ್ರ ಕಾಫಿ ತೋಟಗಳಿಂದ ಕಾಡಿಗೆ ತೆರಳಲು ಹಿಂದೇಟು ಹಾಕಿದವು. ಸಾಕಷ್ಟು ಪ್ರಯತ್ನಪಟ್ಟರೂ ಕೂಡ ಮೂರು ಕಾಡಾನೆಗಳು ಅಭ್ಯತ್ ಮಂಗಲದ ಕಾಫಿ ತೋಟವೊಂದರ ಒಳಕ್ಕೆ ನುಸುಳಿದ್ದು, ತೋಟ ಬಿಟ್ಟು ತೆರಳುತ್ತಿಲ್ಲವೆಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ೧೫ ಕಾಡಾನೆಗಳನ್ನು ಕಾರ್ಯಾ ಚರಣೆ ಮೂಲಕ ಕಾಫಿ ತೋಟಗಳಿಂದ ಓಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಕಾವೇರಿ ನದಿಯ ಮೂಲಕ ದಾಟಿಸ ಲಾಯಿತು.
ಮುಂದಿನ ಕೆಲವೇ ದಿನಗಳಲ್ಲಿ ಕಾಡಾನೆಗಳಿರುವ ಗುಂಪು ಮಾತ್ರ ಕಾಫಿ ತೋಟಗಳಿಂದ ಕಾಡಿಗೆ ತೆರಳಲು ಹಿಂದೇಟು ಹಾಕಿದವು. ಸಾಕಷ್ಟು ಪ್ರಯತ್ನಪಟ್ಟರೂ ಕೂಡ ಮೂರು ಕಾಡಾನೆಗಳು ಅಭ್ಯತ್ ಮಂಗಲದ ಕಾಫಿ ತೋಟವೊಂದರ ಒಳಕ್ಕೆ ನುಸುಳಿದ್ದು, ತೋಟ ಬಿಟ್ಟು ತೆರಳುತ್ತಿಲ್ಲವೆಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ೧೫ ಕಾಡಾನೆಗಳನ್ನು ಕಾರ್ಯಾ ಚರಣೆ ಮೂಲಕ ಕಾಫಿ ತೋಟಗಳಿಂದ ಓಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಕಾವೇರಿ ನದಿಯ ಮೂಲಕ ದಾಟಿಸ ಲಾಯಿತು.
ಮುಂದಿನ ಕೆಲವೇ ದಿನಗಳಲ್ಲಿ ಶಾಲಾ - ಕಾಲೇಜುಗಳು ಪ್ರಾರಂಭ ವಾಗುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದಾಗಿ ಗುಹ್ಯ, ಕರಡಿಗೋಡು, ಅಭ್ಯತ್ಮಂಗಲ, ನಲ್ವತ್ತೇಕರೆ, ವಾಲ್ನೂರು - ತ್ಯಾಗತ್ತೂರು, ಅರೆಕಾಡು ಗ್ರಾಮದ ಶಾಲಾ ಮಕ್ಕಳಿಗೆ ಕಾಡಾನೆಗಳ ಭಯದಿಂದ ಶಾಲೆಗಳಿಗೆ ತೆರಳಿ ಸಂಜೆ ಮನೆಗಳಿಗೆ ಹಿಂತಿರುಗಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿ ಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವಾಸು.ಎ.ಎನ್