ಕೂಡಿಗೆ, ಮೇ ೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಮುಖ್ಯ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ತೀರ್ಮಾನ ತೆಗೆದುಕೊಂಡಿದೆ.

ಹರಾಜಿನ ಅವಧಿ ಮುಕ್ತಾಯಗೊಂಡರೂ ಸಹ ಮರು ಹರಾಜಿನಲ್ಲಿ ಭಾಗವಹಿಸದೆ ಅಂಗಡಿಗಳನ್ನು ನಡೆಸಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ನಿರ್ಣಯದಂತೆ ಅಂಗಡಿಗಳನ್ನು ಖಾಲಿ ಮಾಡಲು ಮೂರು ಬಾರಿ ನೋಟೀಸ್ ನೀಡಿದರೂ ಸಹ ಅಂಗಡಿ ಬಾಡಿಗೆದಾರರು ಮಳಿಗೆಗಳನ್ನು ಖಾಲಿ ಮಾಡದೆ ಇರುವುದರಿಂದ ಗ್ರಾಮ ಪಂಚಾಯಿತಿ ವತಿಯಿಂದ ತಾ. ೧೧ ರಂದು ಮಳಿಗೆಗಳನ್ನು ಖಾಲಿ ಮಾಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ತಿಳಿಸಿದ್ದಾರೆ.