ಗೋಣಿಕೊಪ್ಪ ವರದಿ, ಮೇ ೯ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ಹಂಚೇಟೀರ, ಅಲ್ಲಪಂಡ, ಬಲ್ಲಂಡ, ಪಾರುವಂಗಡ, ಮುಕ್ಕಾಟೀರ (ಪುಲಿಕೋಟ್), ಅಳಮೇಂಗಡ ಹಾಗೂ ಪೊನ್ನೋಲ್ತಂಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಹಂಚೇಟೀರ ತಂಡವು ನಂದೀರವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ನಂದೀರ ೩ ವಿಕೆಟ್ ಕಳೆದುಕೊಂಡು ೨೨ ರನ್ ಕಲೆ ಹಾಕಿತು. ಹಂಚೇಟೀರ ೨೬ ರನ್ ಗಳಿಸಿತು.

ಅಲ್ಲಪಂಡ ತಂಡವು ಕೋದೇಂಗಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಕೋದೇಂಗಡ ೨ ವಿಕೆಟ್ ಕಳೆದುಕೊಂಡು ೮೦ ರನ್ ಗುರಿ ನೀಡಿತು. ಅಲ್ಲಪಂಡ ೩ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.

ಬಲ್ಲಂಡವು ಮಾಳೇಟೀರ (ಕುಕ್ಲೂರು) ತಂಡದ ವಿರುದ್ಧ ೩೬ ರನ್‌ಗಳ ಜಯ ಸಾಧನೆ ಮಾಡಿತು. ಬಲ್ಲಂಡ ೧ ವಿಕೆಟ್ ಕಳೆದುಕೊಂಡು ೯೮ ರನ್ ಬೃಹತ್ ಮೊತ್ತ ಪೇರಿಸಿತು. ಮಾಲೇಟೀರ ೨ ವಿಕೆಟ್ ಕಳೆದುಕೊಂಡು ೬೨ ರನ್ ಮಾತ್ರ ಗಳಿಸಿತು.

ಪಾರುವಂಗಡವು ಅಲ್ಲಪಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಅಲ್ಲಪಂಡ ೪ ವಿಕೆಟ್ ನಷ್ಟಕ್ಕೆ ೪೮ ರನ್ ಗುರಿ ನೀಡಿತು. ಪಾರುವಂಗಡ ೧ ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು.

ಹಂಚೇಟೀರಕ್ಕೆ ಅಪ್ಪಾರಂಡ ವಿರುದ್ಧ ೧೦ ವಿಕೆಟ್ ಭರ್ಜರಿ ಗೆಲುವು ದೊರೆಯಿತು. ಅಪ್ಪಾರಂಡ ೪ ವಿಕೆಟ್ ಕಳೆದುಕೊಂಡು ೩೬ ರನ್ ಕಲೆ ಹಾಕಿತು. ಹಂಚೇಟಿರ ೩.೧ ಒವರ್‌ಗಳಲ್ಲಿ ಗುರಿ ಮುಟ್ಟಿತು.

ಮುಕ್ಕಾಟೀರ (ಪುಲಿಕೋಟ್) ತಂಡವು ಬಲ್ಲಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಬಲ್ಲಂಡ ೬ ವಿಕೆಟ್ ನಷ್ಟಕ್ಕೆ ೫೦ ರನ್ ಗುರಿ ನೀಡಿತು. ಮುಕ್ಕಾಟೀರ ೩ ಚೆಂಡು ಬಾಕಿ ಉಳಿದಿರುವಂತೆ ಗೆದ್ದು ಬೀಗಿತು.

ಪೊನ್ನೋಲ್ತಂಡವು ಚೇರಂಡವನ್ನು ೪೯ ರನ್‌ಗಳಿಂದ ಮಣಿಸಿತು. ಪೊನ್ನೋಲ್ತಂಡ ೧ ವಿಕೆಟ್ ನಷ್ಟಕ್ಕೆ ೮೨ ರನ್ ಕಲೆ ಹಾಕಿತು. ಚೇರಂಡ ೨ ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸಿ ಸೋಲಿಗೆ ಶರಣಾಯಿತು.

ತೆಕ್ಕಡವು ಕುಪ್ಪಣಮಾಡ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ಪಡೆಯಿತು. ನಿಗದಿತ ಓವರ್‌ಗಳಲ್ಲಿ ತೆಕ್ಕಡ ೨ ವಿಕೆಟ್ ನಷ್ಟಕ್ಕೆ ೪೭ ರನ್ ದಾಖಲಿಸಿತು. ಕುಪ್ಪಣಮಾಡ ೨ ವಿಕೆಟ್ ಕಳೆದುಕೊಂಡು ಟೈ ಸಾಧನೆ ಮಾಡಿತು. ಕುಪ್ಪಣಮಾಡ ರನ್ ದಾಖಲಿಸದೆ ೨ ವಿಕೆಟ್ ಕಳೆದುಕೊಂಡು ೧ ರನ್‌ಗಳ ಗುರಿ ನೀಡಿತು. ತೆಕ್ಕಡ ಸುಲಭ ಗೆಲುವು ಪಡೆಯಿತು.

೨ ನೇ ಪಂದ್ಯ ಆಡಿದ ತೆಕ್ಕಡ, ಅಳಮೇಂಗಡ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿತ್ತು. ೩ ವಿಕೆಟ್ ಕಳೆದುಕೊಂಡು ತೆಕ್ಕಡ ೪೫ ರನ್ ಗುರಿ ನೀಡಿತು. ಅಳಮೇಂಗಡ ೨ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಕನ್ನಡ ಚಿತ್ರ ನಟ ಯೋಗೇಶ್ ಸೋಮವಾರ ಪೊರುಕೊಂಡ ಕ್ರಿಕೆಟ್ ನಮ್ಮೆಯನ್ನು ವೀಕ್ಷಣೆ ಮಾಡಿದರು. ಪಾರುವಂಗಡ ಮತ್ತು ಅಲ್ಲಪಂಡ ತಂಡಗಳಿಗೆ ಶುಭ ಕೋರಿದರು.

ನಂದೀರ ಸುಜನ್, ಕೋದೇಂಗಡ ಕಾವೇರಪ್ಪ, ಮಾಲೇಟೀರ ಕವಿಶ್ ಪೊನ್ನಣ್ಣ, ಕುಪ್ಪಣಮಾಡ ಸಚಿನ್, ಅಲ್ಲಪಂಡ ಮಿಲನ್ ನಾಣಯ್ಯ, ಅಪ್ಪಾರಂಡ ನೆಲ್ ದೇವಯ್ಯ, ಬಲ್ಲಂಡ ಉದಯ್, ತೆಕ್ಕಡ ಸಂತೋಷ್, ಚೇರಂಡ ಸಂದೀಪ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.