ಸೋಮವಾರಪೇಟೆ, ಮೇ ೮: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕರ ಶೌಚಾಲಯ ವನ್ನು ಕಿಡಿಗೇಡಿಗಳು ಹಾನಿ ಮಾಡಿ ವಿಕೃತಿ ಮೆರೆದಿದ್ದಾರೆ.
ಶಾಲೆಯ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಕಿಡಿಗೇಡಿಗಳು ಶೌಚಾಲಯದ ಬಾಗಿಲು ಒಡೆದು ಅಲ್ಲಿ ಅಳವಡಿಸಿದ್ದ ಬೇಸಿನ್‌ಗಳ ಮೇಲೆ ಸೈಜ್ ಕಲ್ಲುಗಳನ್ನು ಎತ್ತಿ ಹಾಕಿ ಹಾನಿ ಮಾಡಿದ್ದಾರೆ. ಇದರೊಂದಿಗೆ ಶೌಚಾಲಯದ ಬಾಗಿಲು, ಮೇಲ್ಚಾವಣಿ ಒಡೆದು ಹಾಕಿದ್ದಾರೆ. ಕರ್ತವ್ಯ ನಿಮಿತ್ತ ಶಾಲಾ ಮುಖ್ಯ ಶಿಕ್ಷಕರು ಶಾಲೆಗೆ ತೆರಳಿದ ಸಂದರ್ಭ ಈ ಪ್ರಕರಣ ಬೆಳಿಕಗೆ ಬಂದಿದೆ. ಘಟನೆ ಕುರಿತು ಮುಖ್ಯ ಶಿಕ್ಷಕರು ಶಾಲಾಭಿವೃದ್ದಿ ಸಮಿತಿ ಹಾಗೂ ಐಗೂರು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.