ಗೋಣಿಕೊಪ್ಪ ವರದಿ, ಮೇ ೮: ಅಮ್ಮತ್ತಿ ಸರ್ಕಾರಿ ಪ್ರೌಡಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್‌ನಲ್ಲಿ ಕಂಜಿತAಡ, ಚಿಮ್ಮಣಮಾಡ, ಬೈರೇಟೀರ, ಮಂಡೇಪAಡ, ಕೋಟ್ರಂಗಡ, ಬೈರೇಟೀರ, ಚಂಗುಲAಡ ಹಾಗೂ ನಾಗಂಡ ಗೆಲುವು ಪಡೆದವು.

ನಾಗಂಡಕ್ಕೆ ಅಜ್ಜಿನಿಕಂಡ ವಿರುದ್ದ ೧೧ ರನ್‌ಗಳ ಜಯ ದೊರೆಯಿತು. ನಾಗಂಡ ೨ ವಿಕೆಟ್ ನಷ್ಟಕ್ಕೆ ೬೪ ರನ್ ಗುರಿ ನಡಿತು. ಅಜ್ಜಿನಿಕಂಡ ೪ ವಿಕೆಟ್ ಕಳೆದುಕೊಂಡು ೫೨ ರನ್‌ಗಳಿಗೆ ಆಟ ಮುಗಿಸಿತು.

ಚಂಗುಲAಡ ಕಾಳಚಂಡವನ್ನು ೧೯ ರನ್‌ಗಳಿಂದ ಸೋಲಿಸಿತು. ಚಂಗುಲAಡ ೨ ವಿಕೆಟ್ ಕಳೆದುಕೊಂಡು ೬೭ ರನ್ ಗುರಿ ನೀಡಿತು. ಕಾಳಚಂಡ ೫ ವಿಕೆಟ್ ನಷ್ಟಕ್ಕೆ ೪೭ ರನ್‌ಗಳಷ್ಟೆ ಸೇರಿಸಿತು.

ಬೈರೇಟೀರ ಚೆಟ್ರಂಡ ವಿರುದ್ದ ೨೪ ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಬೈರೇಟೀರ ೨ ವಿಕೆಟ್ ನಷ್ಟಕ್ಕೆ ೫೭ ರನ್‌ಗಳ ಗುರಿ ನೀಡಿತು. ಚೆಟ್ರಂಡ ೫ ವಿಕೆಟ್ ಕಳೆದುಕೊಂಡು ೩೨ ರನ್ ಗಳಿಸಿತು.

ಕೋಟ್ರಂಗಡ ಅಮ್ಮಾಟಂಡವನ್ನು ೧೮ ರನ್‌ಗಳಿಂದ ಸೋಲಿಸಿತು. ಕೋಟ್ರಂಗಡ ೨ ವಿಕೆಟ್ ಕಳೆದುಕೊಂಡು ೬೫ ರನ್ ಪೇರಿಸಿತು. ಅಮ್ಮಾಟಂಡ ೪ ವಿಕೆಟ್ ಕಳೆದುಕೊಂಡು ೪೭ ರನ್ ಸಂಪಾದಿಸಿತು.

ಮAಡೇಪAಡಕ್ಕೆ ಉಡುವೇರ ವಿರುದ್ಧ ೯ ರನ್‌ಗಳ ಜಯ ದೊರೆಯಿತು. ಉಡುವೇರ ೪ ವಿಕೆಟ್ ನಷ್ಟಕ್ಕೆ ೪೧ ರನ್ ಸೇರಿಸಿತು. ಮಂಡೇಪAಡ ೧ ವಿಕೆಟ್ ಕಳೆದುಕೊಂಡು ೨.೨ ಓವರ್‌ಗಳಲ್ಲಿ ಗುರಿ ಮುಟ್ಟಿತು.

ಬೈರೇಟೀರ ತಂಡವು ಕೀತಿಯಂಡವನ್ನು ೨೧ ರನ್‌ಗಳಿಂದ ಸೋಲಿಸಿತು. ಬೈರೇಟೀರ ೫ ವಿಕೆಟ್ ಕಳೆದುಕೊಂಡು ೭೦ ರನ್ ದಾಖಲಿಸಿತು. ಕೀತಿಯಂಡ ೬ ವಿಕೆಟ್ ಕಳೆದುಕೊಂಡು ೪೯ ರನ್ ಮಾತ್ರ ಗಳಿಸಿತು.

ಚಿಮ್ಮಣಮಾಡಕ್ಕೆ ನಾಗಂಡ ವಿರುದ್ದ ೧೦ ವಿಕೆಟ್ ಗೆಲುವು ದಕ್ಕಿತು. ನಾಗಂಡ ೫ ವಿಕೆಟ್ ನಷ್ಟಕ್ಕೆ ೨೫ ರನ್ ಸೇರಿಸಿತು. ಚಿಮ್ಮಣಮಾಡ ವಿಕೆಟ್ ನಷ್ಟವಿಲ್ಲದೆ ೨೯ ರನ್ ಸಿಡಿಸಿತು.

ಕಂಜಿತAಡವು ತಾತೀರವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ತಾತೀರ ೮ ವಿಕೆಟ್ ಕಳೆದುಕೊಂಡು ೪೧ ರನ್ ಗುರಿ ನೀಡಿತು. ಕಂಜಿತAಡ ೨.೪ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.

ಅಜ್ಜಿನಿಕಂಡ ಆಧಿ, ಕಾಳಚಂಡ ಚೇತನ್, ಚೆಟ್ರಂಡ ಬೋಪಣ್ಣ, ಅಮ್ಮಾಟಂಡ ಚಿರಾಗ್, ಉಡುವೇರ ಅಯ್ಯಪ್ಪ, ಕೀತಿಯಂಡ ಸಂದೀಪ್, ನಾಗಂಡ ಕಿರಣ್, ತಾತೀರ ಬೋಪಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.