ಪೊನ್ನಂಪೇಟೆ, ಮೇ ೮: ಹುದಿಕೇರಿ ಸಮೀಪದ ಬೇಗೂರು ಗ್ರಾಮದ ಮತ್ರಂಡ ಕಿಶು ಎಂಬವರ ತೋಟದಲ್ಲಿ ಸೇರಿಕೊಂಡು ಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಗೋಣಿಕೊಪ್ಪಲಿನ ಸ್ನೇಕ್ ಭಾವೆ, ಮನೋಜ್ ಹಾಗೂ ಕಣ್ಣ ಎಂಬವರು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.

ಸೆರೆ ಹಿಡಿಯುವ ಸಂದರ್ಭದಲ್ಲಿ ಕಾಳಿಂಗ ಸರ್ಪ ಮತ್ತೊಂದು ಸಣ್ಣ ಹಾವನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದಿದ್ದ ಪರಿಣಾಮ ಆ ಹಾವು ಸಾವಿಗೀಡಾಗಿದೆ. ಸೆರೆ ಹಿಡಿದಿರುವ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಕುಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.