ಗೋಣಿಕೊಪ್ಪ ವರದಿ, ಮೇ ೮: ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಅನ್ನು ಅಮ್ಮತ್ತೀರ ತಂಡವು ಗೆದ್ದುಕೊಂಡಿದ್ದು, ಕೊಂಡಿಜಮ್ಮAಡ ರನ್ನರ್ ಅಪ್ ಪ್ರಶಸ್ತಿಗೆÀ ತೃಪ್ತಿಕೊಂಡಿತು.
ಫೈನಲ್ ಪಂದ್ಯದಲ್ಲಿ ಅಮ್ಮತ್ತೀರ ತಂಡವು ಕೊಂಡಿಜಮ್ಮAಡವನ್ನು ೯ ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ೩ ನೇ ಬಾರಿಗೆ ಪ್ರಶಸ್ತಿ ಗೆದ್ದ ತಂಡವಾಗಿ ಹೊರ ಹೊಮ್ಮಿತು.
ಕೊಂಡಿಜಮ್ಮAಡ ಮೊದಲು ಬ್ಯಾಟ್ ಮಾಡಿ ೬ ವಿಕೆಟ್ ನಷ್ಟಕ್ಕೆ ೬೬ ರನ್ ಪೇರಿಸಿತು. ಗುರಿ ಬೆನ್ನತ್ತಿದ ಅಮ್ಮತ್ತೀರ ನಿಧಾನ ಗತಿಯ ಬ್ಯಾಟಿಂಗ್ ಗೋಣಿಕೊಪ್ಪ ವರದಿ, ಮೇ ೮: ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಅನ್ನು ಅಮ್ಮತ್ತೀರ ತಂಡವು ಗೆದ್ದುಕೊಂಡಿದ್ದು, ಕೊಂಡಿಜಮ್ಮAಡ ರನ್ನರ್ ಅಪ್ ಪ್ರಶಸ್ತಿಗೆÀ ತೃಪ್ತಿಕೊಂಡಿತು.
ಫೈನಲ್ ಪಂದ್ಯದಲ್ಲಿ ಅಮ್ಮತ್ತೀರ ತಂಡವು ಕೊಂಡಿಜಮ್ಮAಡವನ್ನು ೯ ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ೩ ನೇ ಬಾರಿಗೆ ಪ್ರಶಸ್ತಿ ಗೆದ್ದ ತಂಡವಾಗಿ ಹೊರ ಹೊಮ್ಮಿತು.
ಕೊಂಡಿಜಮ್ಮAಡ ಮೊದಲು ಬ್ಯಾಟ್ ಮಾಡಿ ೬ ವಿಕೆಟ್ ನಷ್ಟಕ್ಕೆ ೬೬ ರನ್ ಪೇರಿಸಿತು. ಗುರಿ ಬೆನ್ನತ್ತಿದ ಅಮ್ಮತ್ತೀರ ನಿಧಾನ ಗತಿಯ ಬ್ಯಾಟಿಂಗ್ ಮೊತ್ತ ಕಲೆ ಹಾಕಲು ತೊಡಕಾಯಿತು. ಬೌಲಿಂಗ್‌ನಲ್ಲಿ ಕೂಡ ಕೊಂಡಿ ಜಮ್ಮಂಡ ನೀರಸ ಪ್ರದರ್ಶನ ನೀಡಿತು.
ಮೊದಲ ಸೆಮಿ ಫೈನಲ್‌ನಲ್ಲಿ ಅಮ್ಮತ್ತಿರ ತಂಡ ಆಂಡಮಾಡವನ್ನು ೭೮ ರನ್‌ಗಳಿಂದ ಮಣಿಸಿ ಫೈನಲ್ ಗೇರಿತು. ಅಮ್ಮತ್ತೀರ ೩ ವಿಕೆಟ್ ನಷ್ಟಕ್ಕೆ ೧೧೧ ಬೃಹತ್ ಮೊತ್ತ ಪೇರಿಸಿತು. ಆಂಡಮಾಡ ೬ ವಿಕೆಟ್ ಕಳೆದು ಕೊಂಡು ಕೇವಲ ೩೩ ರನ್‌ಗಳಿಗೆ ಕುಸಿಯಿತು.
ಎರಡನೇ ಸೆಮಿ ಫೈನಲ್‌ನಲ್ಲಿ ಕೊಂಡಿಜಮ್ಮAಡ ತಂಡ ಪುತ್ತಾಮನೆ ತಂಡವನ್ನು ೮ ವಿಕೆಟ್‌ಗಳಿಂದ ಮಣಿಸಿತು. ಪುತ್ತಾಮನೆ ೩ ವಿಕೆಟ್‌ಗೆ ೬೦ ರನ್ ಕಲೆ ಹಾಕಿತು. ಕೊಂಡಿ ಜಮ್ಮಂಡ ೨ ವಿಕೆಟ್ ಕಳೆದುಕೊಂಡು ೬೧ ರನ್ ದಾಖಲಿಸಿತು.
(ಮೊದಲ ಪುಟದಿಂದ)
ಕ್ವಾರ್ಟರ್ ಫೈನಲ್‌ನಲ್ಲಿ ಪುತ್ತಾಮನೆ ಬಲ್ಯಂಡ ತಂಡವನ್ನು ಮಣಿಸಿ ಸೆಮಿಗೆ ಪ್ರವೇಶ ಪಡೆಯಿತು. ಪುತ್ತಾಮನೆ ೩ ವಿಕೆಟ್ ನಷ್ಟಕ್ಕೆ ೮೦ ರನ್ ಕಲೆ ಹಾಕಿತು. ಬಲ್ಯಂಡ ೩ ವಿಕೆಟ್ ಕಳೆದುಕೊಂಡು ೬೭ ರನ್ ಗಳಿಸಿ ಟೂರ್ನಿಯಿಂದ ಹೊರ ಬಿದ್ದಿತು.
ಪ್ರಶಸ್ತಿಗಳು : ಕೊಂಡಿಜಮ್ಮAಡ ದಿನು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅಮ್ಮತ್ತೀರ ಗಣೇಶ್ ಟೂರ್ನಿಯ ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಅಂತಿಮ ಪಂದ್ಯದ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಗೆ ಭಾಜನರಾದರು. ಅಮ್ಮತ್ತೀರ ಬಿಪಿನ್ ಫೈನಲ್ ಪಂದ್ಯದ ಬೆಸ್ಟ್ ಬೌಲರ್, ಟೂರ್ನಿಯ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಪುತ್ತಾಮನೆ ಸ್ಮರಣ್, ಕಿರಿಯ ಉತ್ತಮ ಆಟಗಾರ ಬಹುಮಾನವನ್ನು ನೆರೆಯಂಡಮ್ಮAಡ ಸಮ್ಯಥ್, ಉತ್ತಮ ಹಿರಿಯ ಆಟಗಾರನಾಗಿ ನೆರೆಯಂಡಮ್ಮAಡ ಪ್ರಶು, ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಾಗಿ ಅಮ್ಮತ್ತೀರ ಗಣೇಶ್, ಒಂದೇ ಒವರ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಪುತ್ತಾಮನೆ ಸ್ಮರಣ್, ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪುತ್ತಾಮನೆ ಅನಿಲ್, ಅಮ್ಮತ್ತೀರ ದೀಕ್ಷಿತ್, ಕೊಂಡಿಜಮ್ಮAಡ ದಿನು, ಅಮ್ಮತ್ತೀರ ಸುನಿಲ್ ಪಡೆದುಕೊಂಡರು.
ಮಹಿಳೆಯರಿಗೆ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹೆಮ್ಮಚ್ಚಿಮನೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಮನ್ನಕಮನೆ ರನ್ನರ್ ಅಪ್ ಸ್ಥಾನ ಪಡೆಯಿತು.
ಅಮ್ಮತ್ತೀರ ಕಪ್ : ಮುಂದಿನ ವರ್ಷ ಅಮ್ಮತ್ತೀರ ಕುಟುಂಬ ಅಮ್ಮಕೊಡವ ನಮ್ಮೆ ಆಯೋಜಿಸಲು ನಿರ್ಧರಿಸಲಾಯಿತು. ಹೆಮ್ಮಚ್ಚಿಮನೆ, ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಅಮ್ಮತ್ತೀರ ಕುಟುಂಬಕ್ಕೆ ಧ್ವಜ ನೀಡುವ ಮೂಲಕ ನಮ್ಮೆ ಆಯೋಜಿಸಲು ಅಧಿಕಾರ ನೀಡಲಾಯಿತು.
ಸಮಾರೋಪ : ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅಮ್ಮಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಿ ಜಾಗದ ಬೇಡಿಕೆ ಇದೆ. ಈ ಬಗ್ಗೆ ಮುತುವರ್ಜಿ ವಹಿಸಿದ್ದು, ಜಾಗ ನೀಡಲಾಗುವುದು ಎಂದು ಭರವಸೆ ನೀಡಿದರು. ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಕಾರ್ಯದರ್ಶಿ ಪುತ್ತಾಮನೆ ಅನಿಲ್, ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಜನಾಂಗದ ಪ್ರಮುಖರಾದ ಡಾ. ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್, ಬಡಕಮ್ಮಂಡ ಕಸ್ತೂರಿ, ಮನ್ನಕಮನೆ ಎ. ರಾಜು, ಬಾನಂಡ ಆಶಾ ಸುಧನ್, ಹೆಮ್ಮಚ್ಚಿಮನೆ ಎ ವಾಸುಮಯ್ಯ, ಹೆಮ್ಮಚ್ಚಿಮನೆ ನಾಣಮಯ್ಯ, ಎ. ರಮೇಶ್, ಎನ್. ಜಾನಕ್ಕಿ, ಹೆಮ್ಮಚ್ಚಿಮನೆ ಲತಾ ಗಣೇಶ್ ಇದ್ದರು.