ಮಡಿಕೇರಿ, ಮೇ ೮: ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಎನ್.ಆರ್. ಹರ್ಡೀಕರ್ ರವರ ೧೩೨ನೇ ಜನ್ಮ ದಿನಾಚರಣೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ದೇಶಕ್ಕೆ ಪ್ರಥಮವಾಗಿ ಶಿಸ್ತನ್ನು ಪರಿಚಯಿಸಿದ ಕೀರ್ತಿ ಹರ್ಡೀಕರ್ ಅವರಿಗೆ ಸಲ್ಲುತ್ತದೆ. ಉತ್ತಮ ಕೆಲಸ ಮಾಡಿದವರ ಉಸಿರು ನಿಂತಿದ್ದರೂ ಹೆಸರು ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂಬುದಕ್ಕೆ ಹರ್ಡೀಕರ್ ಅವರ ಸ್ಮರಣೆಯ ಕಾರ್ಯಕ್ರಮವೇ ಸಾಕ್ಷಿ ಮಡಿಕೇರಿ, ಮೇ ೮: ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಎನ್.ಆರ್. ಹರ್ಡೀಕರ್ ರವರ ೧೩೨ನೇ ಜನ್ಮ ದಿನಾಚರಣೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ದೇಶಕ್ಕೆ ಪ್ರಥಮವಾಗಿ ಶಿಸ್ತನ್ನು ಪರಿಚಯಿಸಿದ ಕೀರ್ತಿ ಹರ್ಡೀಕರ್ ಅವರಿಗೆ ಸಲ್ಲುತ್ತದೆ. ಉತ್ತಮ ಕೆಲಸ ಮಾಡಿದವರ ಉಸಿರು ನಿಂತಿದ್ದರೂ ಹೆಸರು ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂಬುದಕ್ಕೆ ಹರ್ಡೀಕರ್ ಅವರ ಸ್ಮರಣೆಯ ಕಾರ್ಯಕ್ರಮವೇ ಸಾಕ್ಷಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಹಂಸ, ಕೆ.ಎ. ಇಸ್ಮಾಯಿಲ್, ಪಟ್ಟಡ ರಂಜಿ ಪೂಣಚ್ಚ, ಬಿ.ಬಿ.ಸತೀಶ್, ಬಿ.ಎಸ್.ಅನಂತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ, ಪ್ರಮುಖರಾದ ಎಂ.ಎ. ಉಸ್ಮಾನ್, ನೆರವಂಡ ಉಮೇಶ್, ಗೋವಿಂದ ರಾಜ್ ದಾಸ್, ಹೊಸೂರು ಸೂರಜ್, ಅಂಬೇಕಲ್ ನವೀನ್, ರೋಶನ್ ಗಣಪತಿ, ನರೇಂದ್ರ ಕಾಮತ್, ಹೂವಯ್ಯ, ಗಾಯಿತ್ರಿ ನರಸಿಂಹ, ಪ್ರೇಮಾ, ಜಿ.ಎಲ್. ಜನಾರ್ಧನ್, ಸಂದೀಪ್, ಎಸ್.ಕೆ. ಸುಂದರ್, ರಶೀದ್, ಮುತ್ತು, ಪಿಯೂಸ್ ಫೆರೇರ, ಪ್ರಭುರೈ, ಸತೀಶ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.