ಸೋಮವಾರಪೇಟೆ, ಮೇ ೮: ಮಹಾನ್ ಮಾನವತಾವಾದಿ ಬಸವೇಶ್ವರರ ಜನ್ಮದಿನವನ್ನು ಬಸವ ಜಯಂತಿಯೊAದಿಗೆ ವಿಶ್ವ ಸಂಸದೀಯ ದಿನವನ್ನಾಗಿಯೂ ಆಚರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಶ್ವದ ಪ್ರಥಮ ಸಂಸತ್ತನ್ನು ಅನುಭವ ಮಂಟಪ ಮುಖಾಂತರ ಹುಟ್ಟು ಹಾಕಿದ ಪಿತಾಮಹ ವಿಶ್ವ ಗುರು ಬಸವಣ್ಣನವರ ಜನ್ಮ ದಿನವನ್ನು ಬಸವ ಜಯಂತಿಯೊAದಿಗೆ ವಿಶ್ವ ಸಂಸದೀಯ ದಿನವನ್ನಾಗಿಯೂ ಆಚರಣೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅನುಭವ ಮಂಟಪವೇ ವಿಶ್ವದ ಮೊದಲ ಸಂಸತ್ತು ಎಂದು ವಿಶ್ವದಾದ್ಯಂತ ಪ್ರತಿಪಾದನೆ ಮಾಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಸಂಸದೀಯ ದಿನವನ್ನಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಗೋವಿಂದರಾಜ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾದ್ರೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ಜಿಲ್ಲಾಧ್ಯಕ್ಷ ಎ.ಎಸ್. ಮಲ್ಲೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಉಷಾರಾಣಿ, ವೀರಶೈವ ಸಮಾಜದ ಅಧ್ಯಕ್ಷರಾದ ಬಿ.ಪಿ. ಶಿವಕುಮಾರ್, ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷರಾದ ಜಿ.ಬಿ. ಜಯರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.