ಕೂಡಿಗೆ, ಮೇ ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು, ಕೂಡ್ಲೂರು, ವಿಜಯನಗರ, ಸುಂದರನಗರ, ದೊಡ್ಡತ್ತೂರು, ಚಿಕ್ಕತ್ತೂರು ಗ್ರಾಮಗಳಲ್ಲಿ ರೂ. ೫೦ ಲಕ್ಷಕ್ಕೂ ಹೆಚ್ಚು ಮೊತ್ತದ ಕಾಮಗಾರಿಗಳು ನಡೆದು ಪೂರ್ಣ ಹಂತವನ್ನು ತಲುಪಿವೆ.

ಕಳೆದ ತಿಂಗಳಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿವಿಧ ಗ್ರಾಮಗಳಲ್ಲಿ ಉಪ ರಸ್ತೆಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಅದರಂತೆ ವಿವಿಧ ಗ್ರಾಮಗಳಲ್ಲಿ ರಸ್ತೆಯ ಕಾಮಗಾರಿಗಳು ಇಲಾಖೆಯ ಕ್ರಿಯಾಯೋಜನೆ ಅನುಗುಣವಾಗಿ ನಡೆದು ಪೂರ್ಣಗೊಳಿಸಲಾಗುತ್ತಿದೆ. ಕಾಮಗಾರಿಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಕುಮಾರ್, ಇಂಜಿನಿಯರ್ ಕೀರ್ತನ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪರಿಶೀಲನೆ ಮಾಡಿದರು.