ಮಡಿಕೇರಿ, ಮೇ ೮: ಸುಳ್ಯಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಅವರು ಭೇಟಿ ನೀಡಿದರು. ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರ ಕೋರಿಕೆಯಂತೆ ಈ ಭಾಗದ ಗೌಡ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಸಮೀಪದಲ್ಲಿ ಉಚಿತ ವಸತಿ ನಿಲಯವನ್ನು ಮಂಜೂರು ಮಾಡಿದ್ದಾರೆ. ಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ ಅವರೊಂದಿಗೆ ಸಂಘದ ಗೌರವಾಧ್ಯಕ್ಷ ಡಾ. ಅಂಜನಪ್ಪ, ಜತೆ ಕಾರ್ಯದರ್ಶಿ ರಾಘವೇಂದ್ರ ಮತ್ತು ನಿರ್ದೇಶಕ ಮಂಜೇಗೌಡರು ವಸತಿ ನಿಲಯದ ಸ್ಥಳ ವೀಕ್ಷಣೆಗಾಗಿ ಸುಳ್ಯಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ., ಈ ಭಾಗದ ಗೌಡ ಸಮುದಾಯದವರ ಬಗ್ಗೆ ವಿವರಿಸುತ್ತಾ, ಬಡ, ಕೃಷಿ, ಕೂಲಿ ಕಾರ್ಮಿಕರ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶ ನನ್ನದಾಗಿದೆ. ಶತಮಾನಗಳಿಂದಲೂ ಉಚಿತ ವಸತಿ ನಿಲಯದ ಬೇಡಿಕೆ ಈ ಭಾಗದ ಜನತೆಯದ್ದಾಗಿರುತ್ತದೆ. ನಾಲ್ಕನೇ ಬಾರಿ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ ಆಯ್ಕೆ ಹೊಂದಿದ ಈ ಸಂದರ್ಭದಲ್ಲಿ ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸುವುದು ಕರ್ತವ್ಯವಾಗಿದೆ ಎಂಬ ನಿಟ್ಟಿನಲ್ಲಿ ಈ ಬಗ್ಗೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಇವರೊಂದಿಗೆ ಎ.ಓ.ಎಲ್.ಇ. ಇದರ ನಿರ್ದೇಶಕ ಡಾ. ಜ್ಯೋತಿ ಆರ್ ಪ್ರಸಾದ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರರವರು, ಎ.ಓ.ಎಲ್.ಇ. ಇದರ ನಿರ್ದೇಶಕಿ ಡಾ. ಅಭೀಜ್ಞಾ ಕೆ.ಆರ್, ಮೌರ್ಯ ಆರ್. ಕುರುಂಜಿ, ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಉಜ್ವಲ್ ಊರುಬೈಲು ಮತ್ತು ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.