ಮಡಿಕೇರಿ ಮೇ ೭: ಸಿದ್ದಾಪುರ ಅಮೃತ ಯುವ ಮೊಗೇರ ಸಂಘದ ವತಿಯಿಂದ ಅಮೃತ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ಅಮ್ಮತ್ತಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮವನ್ನು ಮೊಗೇರ ಸಮಾಜದ ಸ್ಥಾಪಕಾಧ್ಯಕ್ಷ ಟಿ.ಸದಾನಂದ ಮಾಸ್ಟರ್ ಉದ್ಘಾಟಿಸಿದರು. ಮೊಗೇರ ಸಮಾಜದ ಬಂಧುಗಳು ಕ್ರೀಡಾಕೂಟಗಳ ಮೂಲಕ ಸಂಘಟಿತರಾಗುತ್ತಿದ್ದಾರೆ. ಯುವ ಸಮೂಹ ಕ್ರೀಡೆಯೊಂದಿಗೆ ಸಂಘಟನೆಗೂ ಆಸಕ್ತಿ ವಹಿಸಬೇಕು, ಸಮುದಾಯದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಮಾತನಾಡಿ, ಸಂಘಟನೆಯಿAದ ಮೊಗೇರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಮೊಗೇರ ಸಮುದಾಯ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕಾದರೆ ಯುವಕರು ಸಂಘಟನೆಯನ್ನು ಬಲಪಡಿಸಬೇಕು. ನಮ್ಮ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಪಣ ತೊಡಬೇಕೆಂದು ತಿಳಿಸಿದರು.ಅಮೃತ ಯುವ ಮೊಗೇರ ಸಂಘದ ಅಧ್ಯಕ್ಷ ಪಿ.ಬಿ. ಮಂಜು, ವೀರಾಜಪೇಟೆ ತಾಲೂಕು ಮೊಗೇರ ಸಮಾಜದ ಗೌರವಾಧ್ಯಕ್ಷ ಜಿ.ಮೋಹನ್, ಅಮ್ಮತ್ತಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಮಿತ್ರ, ಕ್ರೀಡಾಧ್ಯಕ್ಷ ರಮೇಶ್, ಅಮೃತ ಯುವ ಮೊಗೇರ ಸಂಘದ ಉಪಾಧ್ಯಕ್ಷ ಮಣಿ, ಕಾರ್ಯದರ್ಶಿಗಳಾದ ವಿಶ್ವನಾಥ್, ನಾರಾಯಣ, ಗೌರವಾಧ್ಯಕ್ಷ ಎಂ.ಜಿ.ಚAದ್ರ, ಪದಾಧಿಕಾರಿಗಳಾದ ರಘು, ಜನಾರ್ಧನ, ಗಣೇಶ್, ಮನು, ಚಂದ್ರ, ಮಹೇಶ್, ಕೃಷ್ಣ, ರಘು ರಾಮು, ಪದ್ಮನಾಭ, ಅರುಣ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕ್ರೀಡಾಕೂಟ ಮೂರು ದಿನಗಳ ಕಾಲ ನಡೆಯಲಿದೆ.