ಮಡಿಕೇರಿ, ಮೇ ೭: ಕೊಡವ ಕುಟುಂಬಗಳ ನಡುವಿನ ೨೩ನೇ ವರ್ಷದ ಹಾಕಿ ಉತ್ಸವ ೨೦೨೩ರಲ್ಲಿ ನಾಪೋಕ್ಲುವಿನಲ್ಲಿ ನಡೆಯುವುದು. ಇದೀಗ ಅಧಿಕೃತವಾದಂತಾಗಿದೆ. ಇಂದು ಬಾಳುಗೋಡುವಿನಲ್ಲಿ ನಡೆದ ಕೊಡವ ಹಾಕಿ ಅಕಾಡೆಮಿಯ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಮುಂದಿನ ಆಯೋಜಕÀರಾದ ಅಪ್ಪಚೆಟ್ಟೋಳಂಡ ಕುಟುಂಬಸ್ಥರಿಗೆ ಅಧಿಕೃತವಾಗಿ

(ಮೊದಲ ಪುಟದಿಂದ) ಧ್ವಜ ಹಸ್ತಾಂತರಿಸಲಾಯಿತು. ಕೊಡವ ಹಾಕಿ ಅಕಾಡೆಮಿಯ ಹಾಲಿ ಆಡಳಿತ ಮಂಡಳಿ ಪ್ರಮುಖರಾದ ಕಾಳೇಂಗಡ ರಮೇಶ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಅಕಾಡೆಮಿಯ ವಾರ್ಷಿಕ ಮಹಾಸಭೆ ಜರುಗಿತು.

ಸಭೆಯಲ್ಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ ಹೊಸದಾಗಿ ರಚನೆಗೊಂಡಿರುವ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಪಾಂಡAಡ ಸುಧೀರ್ ಬೋಪಣ್ಣ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಹಾಗೂ ತಂಡ ಅಧಿಕಾರ ವಹಿಸಿಕೊಂಡಿತು. ನೂತನ ಅಧ್ಯಕ್ಷ ಸುಧೀರ್ ಬೋಪಣ್ಣ ಮಾತನಾಡಿ ಎಲ್ಲರ ಸಹಕಾರ - ಸಲಹೆಯೊಂದಿಗೆ ಅಕಾಡೆಮಿಯನ್ನು ಮುನ್ನಡೆಸುವುದಾಗಿ ಹೇಳಿದರು.

ಬಳಿಕ ಅಪ್ಪಚೆಟ್ಟೋಳಂಡ ಕುಟುಂಬಕ್ಕೆ ಉತ್ಸವ ಆಯೋಜನೆಗೆ ಅಧಿಕೃತವಾಗಿ ಧ್ವಜ ಹಸ್ತಾಂತರಿಸಲಾಯಿತು. ಅಪ್ಪಚೆಟ್ಟೋಳಂಡ ಕುಟುಂಬದ ಅಧ್ಯಕ್ಷರಾದ ಮನು ಮುತ್ತಪ್ಪ, ಪಟ್ಟೆದಾರ ಈರಪ್ಪ, ಉಪಾಧ್ಯಕ್ಷ ಭೀಮಯ್ಯ, ಕಾರ್ಯದರ್ಶಿ ಮಿಥುನ್ ಮಾಚಯ್ಯ, ವಸಂತ್ ಮುತ್ತಪ್ಪ ಮತ್ತಿತರರು ಧ್ವಜ ಸ್ವೀಕರಿಸಿದರು. ಕಾರಣಾಂತರದಿAದ ಮೂರು ವರ್ಷದಿಂದ ವಾರ್ಷಿಕ ಹಾಕಿ ಉತ್ಸವ ನಡೆದಿರಲಿಲ್ಲ. ಇದೀಗ ಅಪ್ಪಚೆಟ್ಟೋಳಂಡ ಕಪ್ ಖಾತರಿಯಾದಂತಾಗಿದೆ.