ಗೋಣಿಕೊಪ್ಪ ವರದಿ, ಮೇ ೭ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢÀಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್‌ನಲ್ಲಿ ಮಡೆಯಂಡ (ಮೂರ್ನಾಡ್), ನೆಲ್ಲಚಂಡ, ಕಾಕಮಾಡ, ಕಾಂಚೇರಿರ, ಕಂಗಾAಡ, ಮಂಡAಗಡ, ಮುದ್ದಂಡ, ಕಲಿಯಂಡ ತಂಡಗಳು ಗೆದ್ದು ಮುನ್ನಡೆ ಪಡೆದುಕೊಂಡವು.

ಮಡೆಯAಡ (ಮೂರ್ನಾಡ್) ತಂಡಕ್ಕೆ ಕೋಡಿರ ವಿರುದ್ಧ ೩೯ ರನ್‌ಗಳ ಗೆಲುವು ದೊರೆಯಿತು. ಮಡೆಯಂಡ ೧ ವಿಕೆಟ್ ನಷ್ಟಕ್ಕೆ ೬೩ ರನ್ ಪೇರಿಸಿತು. ಕೋಡಿರ ೪ ವಿಕೆಟ್ ಕಳೆದುಕೊಂಡು ೩೯ ರನ್ ಗಳಿಸಿತು.

ಮಡೆಯಂಡ (ಮೂರ್ನಾಡ್) ಆಚೆಯಡ ವಿರುದ್ಧ ೧೬ ರನ್ ಜಯ ದೊರೆಯಿತು. ಮಡೆಯಂಡ ೨ ವಿಕೆಟ್ ಕಳೆದುಕೊಂಡು ನೀಡಿದ ೫೬ ರನ್ ಗುರಿ ಬೆನ್ನತ್ತಿದ ಆಚೆಯಡ ೧ ವಿಕೆಟ್ ಕಳೆದುಕೊಂಡು ಕೇವಲ ೩೯ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.

ನೆಲ್ಲಚAಡಕ್ಕೆ ಪುಳ್ಳಂಗಡ ವಿರುದ್ಧ ೩ ರನ್‌ಗಳ ರೋಚಕ ಗೆಲುವು ದೊರೆಯಿತು. ಪುಳ್ಳಂಗಡ ೪ ವಿಕೆಟ್ ಕಳೆದುಕೊಂಡು ೩೯ ರನ್ ಗುರಿ ನೀಡಿತು. ನೆಲ್ಲಚಂಡ ೨ ವಿಕೆಟ್ ನಷ್ಟಕ್ಕೆ ೪೧ ರನ್ ದಾಖಲಿಸಿತು.

ಕಾಕಮಾಡ ತಂಡವು ಮಾದೇಯಂಡ (ಬಲ್ಲಮಾವಟಿ) ವಿರುದ್ಧ ೧೦ ವಿಕೆಟ್‌ಗಳ ಜಯ ಸಾಧಿಸಿತು. ಮಾದೇಯಂಡ ೫ ವಿಕೆಟ್ ಕಳೆದುಕೊಂಡು ೩೫ ರನ್ ದಾಖಲಿಸಿತು. ಕಾಕಮಾಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.

ಕಾಂಚೇರಿರ ಅಡ್ಡೇಂಗಡ ವಿರುದ್ದ ೧೦ ವಿಕೆಟ್ ಗೆಲುವು ಪಡೆಯಿತು. ಅಡ್ಡೇಂಗಡ ೩ ವಿಕೆಟ್ ಕಳೆದುಕೊಂಡು ೫೦ ರನ್ ಗುರಿ ನೀಡಿತು. ಕಾಂಚೇರಿರ ೫೩ ರನ್ ಸಿಡಿಸಿ ಗೆದ್ದು ಬೀಗಿತು.

ಕಂಗಾAಡ ಚೋವಂಡವನ್ನು ೯ ರನ್‌ಗಳಿಂದ ಸೋಲಿಸಿತು. ಕಂಗಾAಡ ೨ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ಚೋವಂಡ ೩ ವಿಕೆಟ್ ಕಳೆದುಕೊಂಡು ೫೫ ರನ್ ಮಾತ್ರ ಗಳಿಸಿತು.

ಮಂಡAಗಡ ತಂಡವು ನಾಯಕಂಡವನ್ನು ೨ ರನ್‌ಗಳಿಂದ ಸೋಲಿಸಿತು. ಮಂಡAಗಡ ೧ ವಿಕೆಟ್ ನಷ್ಟಕ್ಕೆ ೭೪ ರನ್ ಪೇರಿಸಿತು. ನಾಯಕಂಡ ೩ ವಿಕೆಟ್ ಕಳೆದುಕೊಂಡು ೭೨ ರನ್ ಅಷ್ಟೆ ದಾಖಲಿಸಿತು.

ಮುದ್ದಂಡ ಅಯ್ಯಮಾಡ ವಿರುದ್ಧ ೪೭ ರನ್‌ಗಳ ಅಮೋಘ ಗೆಲುವು ಸಾಧಿಸಿತು. ಮುದ್ದಂಡ ವಿಕೆಟ್ ನಷ್ಟವಿಲ್ಲದೆ ೬೬ ರನ್ ದಾಖಲಿಸಿತು. ಐಯಮಾಡ ೫ ವಿಕೆಟ್ ಕಳೆದುಕೊಂಡು ೧೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕಲಿಯಂಡವು ಬಾಚಿನಾಡಂಡ ವಿರುದ್ದ ೯ ವಿಕೆಟ್ ಜಯ ಸಾಧಿಸಿತು. ಬಾಚಿನಾಡಂಡ ೨ ವಿಕೆಟ್ ಕಳೆದು ಕೊಂಡು ೬೦ ರನ್ ಗುರಿ ನೀಡಿತು. ಕಲಿಯಂಡ ೧ ವಿಕೆಟ್ ಕಳೆದುಕೊಂಡು ೨.೩ ಒವರ್‌ಗಳಲ್ಲಿ ಗುರಿ ಸಾಧನೆ ಮಾಡಿತು.