ಕರಿಕೆ / ಮಡಿಕೇರಿ, ಮೇ ೮: ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಅರಣ್ಯ ಭೂಮಿ ಹಾಗೂ ಕಂದಾಯ ಇಲಾಖೆಯ ನಡುವೆ ಇರುವ ಗೊಂದಲ ಕುರಿತು ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ತಮ್ಮ ಕಚೇರಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಶಾಂತಳ್ಳಿ ಹೋಬಳಿಯ ಕುಮಾರಹಳ್ಳಿ, ಕೊತ್ನಹಳ್ಳಿ ಭಾಗಮಂಡಲ ಹೋಬಳಿಯ ಭಾಗಮಂಡಲ, ಕರಿಕೆ ಸೇರಿದಂತೆ ಜಿಲ್ಲೆಯ ಇತರೆ ಗ್ರಾಮದಲ್ಲಿರುವ ಅರಣ್ಯ ಹಾಗೂ ಕಂದಾಯ ಇಲಾಖೆಯ ಗಡಿ ಸಮಸ್ಯೆ ಕುರಿತು ಜಂಟಿ ಸರ್ವೆ ನಡೆಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ಗಳಿಗೆ ಸೂಚನೆ ನೀಡಿದರು.
ಶೀಘ್ರವಾಗಿ ದಿನಾಂಕ ನಿಗದಿ ಮಾಡಿ ಜಂಟಿ ಸರ್ವೆ ನಡೆಸಲು ಉಭಯ ಇಲಾಖೆಗಳು ಪರಸ್ಪರ ಒಮ್ಮತದ ತೀರ್ಮಾನ ತೆಗೆದುಕೊಂಡರು. ನಂತರ ಕೂಟಿಯಾಲ ಸೇತುವೆ ಕಾಮಗಾರಿಯನ್ನು ಕಾನೂನಿನ ಚೌಕಟ್ಟಿನ ಒಳಗೆ ಅನುಮತಿ ಪಡೆಯಲು ಅವಕಾಶವಿದ್ದು ಈ ಬಗ್ಗೆ ಅನುಮತಿ ಪಡೆದು ಕಾಮಗಾರಿ ನಿರ್ವಹಿಸಲು ಜಿ.ಪಂ. ಇಂಜಿನಿಯರ್ಗೆ ಸೂಚಿಸಿದರು. ಸಭೆಯಲ್ಲಿ ಮಡಿಕೇರಿ ತಹಶೀಲ್ದಾರ್ ಮಹೇಶ್, ಸೋಮವಾರಪೇಟೆ ತಾಲೂಕಿನ ಗೋವಿಂದ ರಾಜು, ಸರ್ವೆ ಇಲಾಖೆ ಎಡಿಎಲ್ಆರ್ ವಿರೂಪಾಕ್ಷ, ಲೋಕೋಪಯೋಗಿ ಕಾರ್ಯ ಪಾಲಕ ಅಭಿಯಂತರ ನಾಗರಾಜು, ಜಿ.ಪಂ. ಮುಖ್ಯ ಇಂಜಿನಿಯರ್ ಮಹದೇವ್, ಚೆಸ್ಕಾಂ ಇಂಜಿನಿಯರ್ ಅಶೋಕ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು, ಶಾಂತಳ್ಳಿ ಭಾಗದ ಗ್ರಾಮಸ್ಥರು ಹಾಜರಿದ್ದರು.