ಚೆಯ್ಯಂಡಾಣೆ, ಮೇ ೭: ಗುಂಡಿಕೆರೆ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುವ ಹೆಚ್ಐಜಿ ಫ್ಯೂಚರ್ ದುಬೈ ಸಂಘಟನೆಯ ನೂತನ ಅಧ್ಯಕ್ಷರಾಗಿ ಸಿ.ಎಂ. ಸಲೀಂ ಅವಿರೋಧವಾಗಿ ಆಯ್ಕೆಯಾದರು.
ದುಬೈಯ ಅಲ್ ಮಾಂಝರ್ನಲ್ಲಿ ಹಿರಿಯರಾದ ಬಾರಿಕಾಡ್ ಮಾಹಿನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಝೀರ್ ಅಮೀನಿ ಪ್ರಾರ್ಥನೆ ನಡೆಸಿದರು.
ವೇಲ್ಫೇರ್ ಫೈನಾನ್ಸ್ ಅಧ್ಯಕ್ಷರಾಗಿ ಅಕ್ಬರ್, ಕಾರ್ಯದರ್ಶಿಯಾಗಿ ಸಿ.ಎ. ಲತೀಫ್, ಕೋಶಾಧಿಕಾರಿಯಾಗಿ ರಫೀಕ್ ಪೊಲೀಸ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಾಜಿ ಅಧ್ಯಕ್ಷ ಎಂ.ಯು. ನಿಝಾರ್, ರಫೀಕ್ ಹಿಮಮಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. -ಅಶ್ರಫ್ ಚೆಯ್ಯಂಡಾಣೆ