ಮಡಿಕೇರಿ, ಮೇ ೮: ಮಡಿಕೇರಿ-ಮೈಸೂರು ರಾಷ್ಟಿçÃಯ ಹೆದ್ದಾರಿಯ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರ ಭೂಮಿ ಮುಂಭಾಗ ಅಕ್ರಮವಾಗಿ ಆನೆ ದಂತದಲ್ಲಿ ತಯಾರಿಸಿದ ಕಲಾಕೃತಿಯನ್ನು ಮಾರಾಟ ಮಾಡಲು ಯತ್ನಿಸಿದ ಈರ್ವರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಮಾಲು ಸಹಿತ ಬಂಧಿಸಿದೆ.
ಬೆAಗಳೂರು ಆರ್.ಟಿ. ನಗರದ ರಫೀಕ್ ಅಹಮದ್ ಖಾನ್ ಮತ್ತು ಬೆಂಗಳೂರಿನ ಸಿ.ಆರ್. ಕಾಲೋನಿಯ ಫಾಜಿಲ್ ಖಾನ್ ಬಂಧಿತ ಆರೋಪಿಗಳು. ಬೆಂಗಳೂರಿನಿAದ ಮಡಿಕೇರಿಗೆ ಆನೆ ದಂತದಲ್ಲಿ ಮಾಡಿದ ಕಲಾಕೃತಿಯನ್ನು ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತ್ಚಂದ್ರ ನಿರ್ದೇಶನ
(ಮೊದಲ ಪುಟದಿಂದ) ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ರೆಡ್ಡಿರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್ಐ ಸಿ.ಯು. ಸವಿ, ಹೆಡ್ಕಾನ್ಸ್ಟೇಬಲ್ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ ಮತ್ತು ಕಾನ್ಸ್ಟೇಬಲ್ಗಳಾದ ಸ್ವಾಮಿ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.