ಮಡಿಕೇರಿ, ಮೇ ೬: ಕೊಡಗು ಜಿಲ್ಲೆಯ ನಗರಾಭಿವೃದ್ಧಿ ಕೋಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲಾಮಟ್ಟದ ತಾಂತ್ರಿಕ ಕೋಶಕ್ಕೆ ಸಿಬ್ಬಂದಿಯ ಸೇವೆಯನ್ನು ಹೊರಗುತ್ತಿಗೆ ಮೇರೆಗೆ ಪಡೆದುಕೊಳ್ಳುವ ಸಲುವಾಗಿ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ನಗರಸಭೆ ಮಡಿಕೇರಿ, ಪಟ್ಟಣ ಪಂಚಾಯಿತಿಗಳಾದ ಕುಶಾಲನಗರ, ಸೋಮವಾರಪೇಟೆ ಹಾಗೂ ವೀರಾಜಪೇಟೆಗಳಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ತಜ್ಞರ ಸೇವೆಯನ್ನು ಪಡೆಯುವ ಸಲುವಾಗಿ ವಸತಿ ಎಂಜಿನಿಯರ್ (ಇಇ ಶ್ರೇಣಿ) ಮತ್ತು ಮುನ್ಸಿಪಾಲ್ ಸಿವಿಲ್ ಇಂಜಿನಿಯರ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ ಮತ್ತು ಅನುಭವಗಳು: ಸಾರ್ವಜನಿಕ ಆರೋಗ್ಯ ಇಂಜಿನಿಯರಿAಗ್ ಅಥವಾ ಡಿಪ್ಲೋಮಾ ಇಂಜಿನಿಯರಿAಗ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಮೂಲ ಸೌಕರ್ಯ ಕಾಮಗಾರಿಗಳ ಸಂಗ್ರಹಣೆ, ವಿನ್ಯಾಸ ಮತ್ತು ಮೇಲ್ವಿಚಾರಣೆಯಲ್ಲಿ ಕನಿಷ್ಟ ಮೂರು ವರ್ಷಗಳ ಅನುಭವ ಹೊಂದಿರಬೇಕು. ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಅನುಸರಣೆಗಳ ಮೇಲ್ವಿಚಾರಣೆಗಾಗಿ ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಹೊಂದಿಸಲು ಯುಎಲ್‌ಬಿಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿರಬೇಕು. ಮುನ್ಸಿಪಾಲ್ ಇಂಜಿನಿಯರಿAಗ್ ಆಗಿ ಕೆಲಸ ನಿರ್ವಹಿಸಿದ ಅನುಭವ ಇರಬೇಕು. ಸ್ಥಳೀಯ ಭಾಷೆಯಲ್ಲಿ ಹಿಡಿತವಿರಬೇಕು. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಾ. ೧೨ ರ ಸಂಜೆ ೫.೩೦ ರೊಳಗೆ ದಾಖಲಾತಿಯೊಂದಿಗೆ ಕಚೇರಿಗೆ ಸಲ್ಲಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.