ವೀರಾಜಪೇಟೆ, ಮೇ ೬: ಇಲ್ಲಿಗೆ ಸಮೀಪದ ಕೊಟ್ಟೋಳಿ ಗ್ರಾಮದ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಧೂಮಾವತಿ ದೈವದ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಮೂರು ವರ್ಷಕೊಮ್ಮೆ ನಡೆಯುವ ಉತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ ನಡೆದು, ಸಂಜೆ ಧೂಮಾವತಿ ಬಂಟದೈವದ ಕೋಲವು ನಡೆಯಿತು. ಮರುದಿನ ಶ್ರಿ ಧೂಮಾವತಿ ದೈವದ ಕೋಲವು ನಡೆಯಿತು. ಅಂದೆ ಸಂಜೆ ಪಾಷಾಣಮೂರ್ತಿ, ಮೂಕಾಂಬಿಕಾ ಗುಳಿಗ, ಪಂಜುರ್ಲಿ ಹಾಗೂ ಸತ್ಯದೇವತೆಗಳ ಕೋಲವು ನಡೆದವು. ಶ್ರೀ ಧೂಮಾವತಿ ದೈವದ ಕೋಲವನ್ನು ನೋಡಿ ಭಕ್ತರು ಪುನೀತರಾದರಲ್ಲದೆ ಈ ವರ್ಷ ಸಹಸ್ರ ಭಕ್ತರು ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಭಾಗವಹಿಸಿ ಹರಕೆಯನ್ನು ಸಲ್ಲಿಸಿದರು.