(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮೇ ೬: ಇತ್ತೀಚಿನ ದಿನಗಳಲ್ಲಿ ಕಳ್ಳರು ನಗದು ಕಳ್ಳತನ ಮಾಡಲು ಯೋಜನೆ ರೂಪಿಸಿದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಐಷಾರಾಮಿ ಜೀವನ ನಡೆಸಲು ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಕಳ್ಳರ ಗುಂಪು ಇದೀಗ ಪೆಟ್ರೋಲ್ ಬಂಕ್‌ನ ಮೇಲೆ ಕಣ್ಣಿಟ್ಟಿದೆ. ಏ. ೩೦ ಹಾಗೂ ಮೇ ೧ ರಂದು ಬ್ಯಾಂಕ್‌ಗಳಿಗೆ ರಜೆ ಇರುವುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ಮೇ ೨ರ ಮುಂಜಾನೆ ೪.೩೦ರ ಸುಮಾರಿಗೆ ವೀರಾಜಪೇಟೆಯ ಪಂಜರ್‌ಪೇಟೆಯ ನಯರ ಪೆಟ್ರೋಲ್ ಬಂಕ್‌ಗೆ ನುಗ್ಗಿ ದೊಡ್ಡ ಪ್ರಮಾಣದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪೆಟ್ರೋಲ್ ಬಂಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಗದು ಹಣವಿರುವುದನ್ನು ಗಮನಿಸಿದ್ದ ಕಳ್ಳರು ಬರೋಬ್ಬರಿ ರೂ. ೪.೩೬ ಲಕ್ಷಕ್ಕೂ ಅಧಿಕ ಹಣವನ್ನು ಅಪಹರಿಸಿದ್ದಾರೆ. ಎರಡು ದಿನಗಳಿಂದ ಸಂಗ್ರಹವಾಗಿದ್ದ ಹಣವನ್ನು ಬಂಕ್‌ನ ವ್ಯವಸ್ಥಾಪಕರು ಬಂಕ್‌ನಲ್ಲಿಯೇ ಬಿಟ್ಟು ತೆರಳಿದ್ದರು. ಇದನ್ನು ಖಾತರಿಪಡಿಸಿಕೊಂಡ ಕಳ್ಳರು ರಾತ್ರಿ ನಗದನ್ನು ದೋಚಿ ಪರಾರಿ ಯಾಗಿದ್ದಾರೆ.
(ಮೊದಲ ಪುಟದಿಂದ) ಮುಂಜಾನೆ ಎಂದಿನAತೆ ಬಂಕ್‌ಗೆ ಬಂದು ಪರಿಶೀಲಿಸಿದಾಗ ಹಣ ದೋಚಿರುವ ಬಗ್ಗೆ ಬೆಳಕಿಗೆ ಬಂದಿದೆ.
ಪೊಲೀಸ್ ಸಭೆ : ಪೆಟ್ರೋಲ್ ಬಂಕ್‌ನಲ್ಲಿ ಭಾರೀ ಪ್ರಮಾಣದ ಹಣ ದೋಚಿರುವ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ನೇತೃತ್ವದಲ್ಲಿ ದಕ್ಷಿಣ ಕೊಡಗಿನ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ ಹಾಗೂ ಬಾಳೆಲೆ ನಗರದಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆ ಆಯೋಜಿಸಿ ಹಲವು ಸೂಚನೆಗಳನ್ನು ನೀಡಿದರು.
ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಗಳು ರಸ್ತೆಗೆ ಕಾಣುವಂತೆ ಮಾರ್ಪಡಿಸುವುದು, ಪೆಟ್ರೋಲ್ ಬಂಕ್‌ಗೆ ಬರುವ ವಾಹನಗಳ ನಂಬರ್ ಪ್ಲೇಟ್‌ಗಳು ಕಾಣುವ ಹಾಗೆ ಸಿಸಿ ಕ್ಯಾಮೆರಾ ಜೋಡಣೆ ಮಾಡುವುದು, ಬಂಕ್‌ನಲ್ಲಿ ಕರ್ತವ್ಯದಲ್ಲಿರುವ ರಾತ್ರಿ ಸಿಬ್ಬಂದಿಗಳು ಹೆಚ್ಚಿನ ಗಮನ ಹರಿಸಿ ಕರ್ತವ್ಯ ನಿರ್ವಹಿಸುವಂತೆ ಎಚ್ಚರ ವಹಿಸುವುದು. ಸಿಸಿ ಕ್ಯಾಮರಾ ಇಲ್ಲದ ಪೆಟ್ರೋಲ್ ಬಂಕ್‌ನಲ್ಲಿ ಖಡ್ಡಾಯವಾಗಿ ಕ್ಯಾಮರಾ ಅಳವಡಿಸುವುದು. ಪ್ರತಿನಿತ್ಯ ಸಂಗ್ರಹವಾಗುವ ಹಣವನ್ನು ಬಂಕ್‌ನಲ್ಲಿ ಇಟ್ಟುಕೊಳ್ಳದೆ ಆಗಿಂದ್ದಾಗ್ಗೆ ಬ್ಯಾಂಕ್‌ಗೆ ಜಮಾ ಮಾಡುವುದು.
ಕರ್ತವ್ಯ ನಿರ್ವಹಿಸುವ ನೌಕರರ ಬಗ್ಗೆ ಎಚ್ಚರ ವಹಿಸುವುದು ಸಿಸಿ ಕ್ಯಾಮೆರಾವನ್ನು ಪ್ರತಿದಿನ ಚೆಕ್ ಮಾಡುವುದು ಹಾಗೂ ದಿನಾಂಕ, ಸಮಯವನ್ನು ನಿಗದಿಪಡಿಸುವುದು. ಪೆಟ್ರೋಲ್ ಬಂಕ್‌ನಲ್ಲಿರುವ ನೌಕರುಗಳಿಗೆ ತುರ್ತು ಸಂದರ್ಭಗಳಲ್ಲಿ ಯಾವುದೇ ಅನಾಹುತಗಳು ಉಂಟಾದಲ್ಲಿ ಕೂಡಲೇ ೧೧೨ಕ್ಕೆ ಕರೆ ಮಾಡುವುದು, ಸ್ಥಳೀಯ ಪೊಲೀಸ್ ಠಾಣೆ ಮತ್ತು ೧೧೨ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು. ಪೆಟ್ರೋಲ್ ಹಾಗೂ ಡೀಸಲ್‌ಗಳನ್ನು ಗ್ರಾಮಗಳಲ್ಲಿ ಮಾರಾಟ ಮಾಡಲು ಕೊಂಡೊಯ್ಯುವುದನ್ನು ನಿಲ್ಲಿಸಬೇಕು. ಎಂಬ ವಿಷಯಗಳ ಬಗ್ಗೆ ವೃತ್ತ ನಿರೀಕ್ಷಕ ಜಯರಾಮ್ ಅವರು ಆಗಮಸಿದ್ದ ಪೆಟ್ರೋಲ್ ಬಂಕ್ ಮಾಲೀಕರಿಗೆ ಹಾಗೂ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು. ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಂಕ್ ಕಾವಲಿಗಾಗಿ ಕಾವಲುಗಾರರನ್ನು ನೇಮಿಸಿಕೊಳ್ಳುವುದು ಅಪರಿಚಿತ ವ್ಯಕ್ತಿಗಳು ಹಾಗೂ ಸಂದೇಹಾಸ್ಪದ ವ್ಯಕ್ತಿಗಳು ಕಂಡುಬAದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕೆಂದು ತಿಳಿಸಿದರು.