ಮಡಿಕೇರಿ, ಮೇ ೭: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನಲ್ಲಿ ನಡೆಯುತ್ತಿರುವ ಕೊಡಗು ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾಟದಲ್ಲಿ ಕಟ್ಟೆಮನೆ, ಪಡಿಕಲ್, ದೇವಜನ ತಂಡಗಳು ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ. ಮೊದಲ ಪಂದ್ಯವನ್ನು ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಷ್ಯಂತ್ ಉದ್ಘಾಟಿಸಿದರು. ಕಟ್ಟೆಮನೆ ತಂಡ ಪಾಕ ಮುಕ್ಕಾಟಿ ತಂಡವನ್ನು ೮-೦ ಗೋಲುಗಳಿಂದ ಸೋಲಿಸಿತು. ಪರಿಚನ ತಂಡ ತೋಟಂಬೈಲು ತಂಡವನ್ನು ೧ ಗೋಲಿನಿಂದ ಮಣಿಸಿತು.
ಕಟ್ರತನ ತಂಡ ಪಡಿಕಲ್ ವಿರುದ್ಧ ೨-೪ ಗೋಲುಗಳ ಸೋಲು ಕಂಡಿತು. ದೇವಜನ ತಂಡ ಬಿದ್ರುಪಣೆ ವಿರುದ್ಧ ೨ ಗೋಲುಗಳ ಜಯ ಸಾಧಿಸಿತು. ಕೊಳಂಬೆ ತಂಡ ಪಾಂಡನ ತಂಡದ ವಿರುದ್ಧ ೧ ಗೋಲುಗಳ ಗೆಲುವು ಸಾಧಿಸಿತು. ಇಟ್ಟಣಿಕೆ ತಂಡ ಪಾರೆರ ವಿರುದ್ಧ ೧ ಗೋಲುಗಳ ಜಯ ಸಾಧಿಸಿತು.