ಗೋಣಿಕೊಪ್ಪ ವರದಿ, ಮೇ ೫: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಮಾಜಿ ಚಾಂಪಿಯನ್ ಚೆಕ್ಕೇರ ಹಾಗೂ ಆತಿಥೇಯ ಪೊರುಕೊಂಡ ಸೇರಿದಂತೆ ೧೫ ತಂಡಗಳು ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡವು.

ಮತ್ತಾರAಡಕ್ಕೆ ಐಚೇಟ್ಟೀರ ವಿರುದ್ಧ ೪೦ ರನ್‌ಗಳ ಗೆಲುವು ಲಭಿಸಿತು. ಮತ್ತಾರಂಡ ವಿಕೆಟ್ ನಷ್ಟವಿಲ್ಲದೆ ೮೦ ರನ್ ಕಲೆ ಹಾಕಿತು. ಐಚೇಟ್ಟೀರ ೨ ವಿಕೆಟ್ ಕಳೆದುಕೊಂಡು ೪೦ ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಕುಂಡಚ್ಚೀರ ತಂಡ ಕಲ್ಯಾಟಂಡ ವಿರುದ್ಧ ೧೦ ವಿಕೆಟ್ ಜಯ ಪಡೆಯಿತು. ಕಲ್ಯಾಟಂಡ ೬ ವಿಕೆಟ್ ನಷ್ಟಕ್ಕೆ ೧೮ ರನ್ ಸೇರಿಸಿತು. ಕುಂಡಚ್ಚೀರ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.

ಕುಂಡ್ಯೋಳAಡವು ಅಪ್ಪುಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಅಪ್ಪುಡ ೭ ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿತು. ಕುಂಡ್ಯೋಳAಡ ೧ ವಿಕೆಟ್ ಕಳೆದುಕೊಂಡು ೨೯ ರನ್ ಗಳಿಸಿತು. ಕೋಟ್ರಂಗಡ ತಂಡವು ಅಜ್ಜಿಕುಟ್ಟೀರವನ್ನು ೪೩ ರನ್‌ಗಳಿಂದ ಮಣಿಸಿತು. ಕೋಟ್ರಂಗಡ ೧ ವಿಕೆಟ್ ಕಳೆದುಕೊಂಡು ೮೩ ರನ್ ದಾಖಲಿಸಿತು. ಅಜ್ಜಿಕುಟ್ಟೀರ ೨ ವಿಕೆಟ್ ಕಳೆದುಕೊಂಡು ೪೦ ರನ್ ಸೇರಿಸಿ ಟೂರ್ನಿಯಿಂದ ಹೊರ ಬಿದ್ದಿತು.

ಉಡುವೇರ ತಂಡವು ಕಾಯಪಂಡವನ್ನು ೩ ರನ್‌ಗಳಿಂದ ಮಣಿಸಿತು. ಉಡುವೇರ ೧ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು. ಕಾಯಪಂಡ ೩ ವಿಕೆಟ್ ಕಳೆದುಕೊಂಡು ೪೦ ರನ್ ಮಾತ್ರ ಗಳಿಸಿತು. ಮೇವಡ ತಂಡವು ಐನಂಡ ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಐನಂಡ ೨ ವಿಕೆಟ್ ನಷ್ಟಕ್ಕೆ ೩೦ ರನ್ ಕಲೆ ಹಾಕಿತು. ಮೇವಡ ೨.೧ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.

ಆಲೆಮಾಡಕ್ಕೆ ನಡಿಕೇರಿಯಂಡ ವಿರುದ್ಧ ೨ ರನ್ ಜಯ ಲಭಿಸಿತು. ಆಲೆಮಾಡ ೧ ವಿಕೆಟ್ ಕಳೆದುಕೊಂಡು ೩೦ ರನ್ ಪೇರಿಸಿತು. ನಡಿಕೇರಿಯಂಡ ೩ ವಿಕೆಟ್ ಕಳೆದುಕೊಂಡು ೨೮ ರನ್‌ಗಳಿಸಿ ಸೋಲಿಗೆ ಶರಣಾಯಿತು. ಪೋರಂಗಡಕ್ಕೆ ಕುಪ್ಪಂಡ (ನಾಂಗಾಲ) ವಿರುದ್ಧ ೨೦ ರನ್ ಗೆಲುವು ದೊರೆಯಿತು. ಪೋರಂಗಡ ೧ ವಿಕೆಟ್ ನಷ್ಟಕ್ಕೆ ೫೦ ಸಿಡಿಸಿತು. ಕುಪ್ಪಂಡ ೨ ವಿಕೆಟ್ ಕಳೆದುಕೊಂಡು ೩೦ ರನ್ ಮಾತ್ರ ಗಳಿಸಿತು.

ಚೀಯಕ್‌ಪೂವಂಡಕ್ಕೆ ಮತ್ತಾರಂಡ ವಿರುದ್ಧ ೯ ವಿಕೆಟ್ ಗೆಲುವು ದೊರೆಯಿತು. ಮತ್ತಾರಂಡ ೩ ವಿಕೆಟ್ ಕಳೆದುಕೊಂಡು ೨೪ ರನ್ ಗಳಿಸಿತು. ಚಿಯಕ್‌ಪೂವಂಡ ೧.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ಗೆಲುವಿನ ಸಿಹಿ ಅನುಭವಿಸಿತು. ಕರೋಟೀರವು ಮುಕ್ಕಾಟೀರ (ಹರಿಹರ) ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ಮುಕ್ಕಾಟೀರ ೩ ವಿಕೆಟ್ ನಷ್ಟಕ್ಕೆ ೨೨ ರನ್ ಸೇರಿಸಿತು. ಕರೋಟೀರ ೨ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೨೩ ರನ್ ಗಳಿಸಿತು.

ಬೊಳ್ಳಚೆಟ್ಟೀರ ಕುಂಡಚ್ಚೀರ ವಿರುದ್ಧ ೪ ರನ್‌ಗಳ ರೋಚಕ ಗೆಲುವು ದಾಖಲಿಸಿತು. ಬೊಳ್ಳಚೆಟ್ಟೀರ ೩ ವಿಕೆಟ್ ಕಳೆದುಕೊಂಡು ೪೪ ರನ್ ಪೇರಿಸಿತು. ಕುಂಡಚ್ಚೀರ ೩ ವಿಕೆಟ್ ಕಳೆದುಕೊಂಡು ೪೦ ರನ್ ಮಾತ್ರ ಗಳಿಸಿತು.

ಬಲ್ಲಚಂಡವು ಕುಂಡ್ಯೋಳAಡವನ್ನು ೬ ರನ್‌ಗಳಿಂದ ಸೋಲಿಸಿತು. ಬಲ್ಲಚಂಡ ೩ ವಿಕೆಟ್ ನಷ್ಟಕ್ಕೆ ೩೫ ರನ್ ಸೇರಿಸಿತು. ಕುಂಡ್ಯೋಳAಡ ೩ ವಿಕೆಟ್ ಕಳೆದುಕೊಂಡು ೨೯ ರನ್ ದಾಖಲಿಸಿತು. ಮಂಡುವAಡವು ಪೋರಂಗಡವನ್ನು ೪೭ ರನ್‌ಗಳಿಂದ ಮಣಿಸಿತು ಸಂಭ್ರಮಿಸಿತು. ಮಂಡುವAಡ ೩ ವಿಕೆಟ್ ಕಳೆದುಕೊಂಡು ೫೨ ರನ್‌ಗಳ ಗುರಿ ನೀಡಿತು. ಪೋರಂಗಡ ೮ ವಿಕೆಟ್ ಕಳೆದುಕೊಂಡು ೪ ರನ್ ಮಾತ್ರ ಗಳಿಸಲು ಶಕ್ತವಾಯಿತು.

ಆತಿಥೇಯ ಪೊರುಕೊಂಡ ಅಯ್ಯಕುಟ್ಟೀರ ತಂಡವನ್ನು ೨೮ ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿತು. ಪೊರುಕೊಂಡು ವಿಕೆಟ್ ನಷ್ಟವಿಲ್ಲದೆ ೭೨ ರನ್ ಕಲೆ ಹಾಕಿತು. ಅಯ್ಯಕುಟ್ಟೀರ ೩ ವಿಕೆಟ್ ಕಳೆದುಕೊಂಡು ೪೪ ರನ್‌ಗಳಿಗೆ ಆಟ ಮುಗಿಸಿತು. ಮಾಜಿ ಚಾಂಪಿಯನ್ ಚೆಕ್ಕೇರ ತಂಡವು ಆಲೆಮಾಡ ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆಲೆಮಾಡ ೪ ವಿಕೆಟ್ ಕಳೆದುಕೊಂಡು ೪೨ರನ್ ಗುರಿ ನೀಡಿತು. ಚೆಕ್ಕೇರ ೧.೪ ಓವರ್‌ಗಳಲ್ಲಿ ಗುರಿ ಮುಟ್ಟಿತು. ಪೋರಂಗಡ ಸೂರಜ್, ಕುಂಡ್ಯೋಳAಡ ಕಾರ್ಯಪ್ಪ, ಕುಂಡಚ್ಚೀರ ಅಚ್ಚಪ್ಪ, ಮುಕ್ಕಾಟೀರ (ಹರಿಹರ) ಪ್ರಮಂಕ್, ಮತ್ತಾರಂಡ ನಾಚಪ್ಪ, ಕುಪ್ಪಂಡ (ನಾಂಗಾಲ) ಬೋಪಣ್ಣ, ನಡಿಕೇರಿಯಂಡ ಚೆಂಗಪ್ಪ, ಐನಂಡ ರಂಜನ್, ಕಾಯಪಂಡ ಪ್ರತ್ವಿಕ್, ಅಯ್ಯಕುಟ್ಟೀರ ಭವಿಷ್, ಆಲೆಮಾಡ ವಿಶ್ವನಾಥ್, ಅಜ್ಜಿಕುಟ್ಟೀರ ವಿಷ್ನು, ಅಪ್ಪುಡ ಮಹೇಶ್, ಕಲ್ಯಾಟಂಡ ಸಂದೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.