ಶನಿವಾರಸAತೆ, ಮೇ ೫: ಶನಿವಾರಸಂತೆಯ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಅಶೋಕ ಲೈಲ್ಯಾಂಡ್ ಪಿಕ್‌ಪ್ ಕೆ.ಎ. ೧೩ ಡಿ. ೦೧೪೩ ಚಾಲಕ ಟಿ.ಎನ್. ಭರತ್ ಎಂಬವರಿಗೆ ನ್ಯಾಯಾಲಯ ರೂ. ೧೬ ಸಾವಿರ ದಂಡ ವಿಧಿಸಿದೆ.

ತಾ. ೩ ರಂದು ಬೆಳಿಗ್ಗೆ ತಾವರೆಕೆರೆ ಕೊಪ್ಪಲಿನ ಚಾಲಕ ಟಿ.ಎನ್. ಭರತ್ ಜನರನ್ನು ತುಂಬಿಸಿಕೊAಡು ದಾಖಲಾತಿ ಇಲ್ಲದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಕರ್ತವ್ಯ ನಿರತ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಸೋಮವಾರಪೇಟೆ ನ್ಯಾಯಾಲಯ ತಾ. ೪ ರಂದು ಚಾಲಕ ಭರತ್‌ಗೆ ರೂ. ೧೬ ಸಾವಿರ ದಂಡ ವಿಧಿಸಿದೆ. ಚಾಲಕ ನ್ಯಾಯಾಲಯಕ್ಕೆ ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಂಡಿದ್ದಾರೆ.