ಕುಶಾಲನಗರ, ಮೇ ೫: ಪರಿಶಿಷ್ಟ ಪಂಗಡಕ್ಕೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ. ೭.೫ ರಷ್ಟು ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಪ್ರಮುಖರು ಒತ್ತಾಯಿಸಿದ್ದಾರೆ.

ರಾಜ್ಯ ಸಮಿತಿ ಪ್ರಮುಖರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಪಂಗಡಗಳ ರಕ್ಷಣೆಗಾಗಿ ಭಾರತ ಸಂವಿಧಾನದಲ್ಲಿ ಸೂಕ್ತ ಮೀಸಲಾತಿಯ ಅವಕಾಶವನ್ನು ಒದಗಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರಿಗೆ ಈ ಸಂಬAಧ ನೀಡಬೇಕಾದ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷö್ಯ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹೋರಾಟ ಕ್ರಿಯಾ ಸಮಿತಿಯ ಪ್ರಮುಖರಾದ ಹಿರಿಯ ನಿವೃತ್ತ ಅಧಿಕಾರಿ ಬಿ. ಶಿವಪ್ಪ ಮಾತನಾಡಿ, ಪರಿಶಿಷ್ಟ ಪಂಗಡದ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ನಿರ್ದೇಶನಾಲಯ ಕಲ್ಪಿಸಲಾಗಿದೆ. ಆದರೆ ಆ ಮೂಲಕ ಸಮುದಾಯದ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ನಿರ್ದೇಶನಾಲಯ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ಕೆಳಮಟ್ಟದಲ್ಲಿರುವ ಜನಾಂಗದ ಜನರಿಗೆ ಶಿಕ್ಷಣ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಜನರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಂವಿಧಾನ ಪ್ರಕಾರ ಎಸ್ಸಿ, ಎಸ್ಟಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯ ಅಗತ್ಯತೆ ಇದೆ. ಇದನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು. ಮೀಸಲಾತಿ ಹೆಚ್ಚು ಮಾಡುವ ನಿಟ್ಟಿನಲ್ಲಿ ಸಮಾಜದ ಹರಿಕಾರ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ ೭೯ ದಿನಗಳಿಂದ ಅಹೋರಾತ್ರಿ ಚಳವಳಿ ನಡೆಸುತ್ತಿದ್ದಾರೆ ಪ್ರಸಕ್ತ ಶೇಕಡ ಮೂರರಿಂದ ೭.೫ ರಷ್ಟು ಮೀಸಲಾತಿ ಅಗತ್ಯವಿದೆ ಎಂದ ಅವರು ಈ ಮೂಲಕ ಪರಿಶಿಷ್ಟ ಪಂಗಡ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.

ಈ ಹಿನ್ನೆಲೆ ತಾ. ೨೦ ರಂದು ರಾಜ್ಯದ ಪ್ರತಿ ತಾಲೂಕು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಹವಾಲು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಹೋರಾಟ ಸಮಿತಿಯ ಪ್ರಮುಖರಾದ ನಿವೃತ್ತ ಹಿರಿಯ ಅಧಿಕಾರಿ ಕೆ.ಎಸ್. ಮೃತ್ಯುಂಜಯ ಅವರು ಮಾತನಾಡಿದರು.

ಈ ಸಂದರ್ಭ ಹೋರಾಟ ಕ್ರಿಯಾಸಮಿತಿಯ ರಾಜ್ಯ ಸಮಿತಿಯ ಪ್ರಮುಖರಾದ ಕೆ.ಹೆಚ್. ಮಲ್ಲೇಶಪ್ಪ, ಎಸ್. ಸಿದ್ದಪ್ಪ, ಹಾನಗಲ್ ಜೋಯಪ್ಪ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಅಶೋಕ್ ಖಜಾಂಚಿ ಆರ್. ಕೃಷ್ಣ, ಕೆ.ಆರ್. ಚಂದ್ರು, ಸುರೇಶ್, ಚಂದನ್ ಕುಮಾರ್, ಗೌರವಾಧ್ಯಕ್ಷ ಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮತ್ತಿತರರು ಇದ್ದರು.