ಮಡಿಕೇರಿ, ಮೇ ೫: ನವದೆಹಲಿಯಲ್ಲಿ ಜರುಗಿದ ೨೦೨೨ನೇ ಸಾಲಿನ ಖೇಲೋ ಇಂಡಿಯಾ ಮಾಸ್ಟರ್ ಆಫ್ ಗೇಮ್ಸ್ನಲ್ಲಿ ಕರ್ನಾಟಕ ಮಹಿಳಾ ಹಾಕಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಕರ್ನಾಟಕ ೪-೦ ಗೋಲಿನಿಂದ ತಮಿಳುನಾಡು ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
೪೦+ ವಿಭಾಗದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ತಂಡದ ೧೬ ಸದಸ್ಯರ ಪೈಕಿ ಕೊಡಗಿನ ಮೂಲದ ೮ ಆಟಗಾರ್ತಿಯರು ಪಾಲ್ಗೊಂಡಿದ್ದರು. ಕೋಚ್ ಆಗಿ ಕೂಡ ಕೊಡಗಿನವರು ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲೆಯ ಕದನೂರಿನವರಾದ ಅಮ್ಮುಣಿಚಂಡ ಸಂಜು ಸೋಮಯ್ಯ ಕೋಚ್ ಆಗಿದ್ದರೆ, ತಂಡದ ಆಟಗಾರ್ತಿಯರಾಗಿ ಮಾಚಿಮಂಡ ಝರೀನ ಅಪ್ಪಯ್ಯ (ತಾಮನೆ - ಅಲ್ಲಪ್ಪಿರ) ಪೂದ್ರಿಮಾಡ ಸರಿತ ತಮ್ಮಯ್ಯ (ತಾಮನೆ : ಮೊಣ್ಣೆಕಂಡ), ಪಟ್ಟಡ ಅಶ್ವಿನಿ ನಂಜಪ್ಪ, ಮೊಳ್ಳೆರ ಶ್ಯಾಮಲ, ನವೀನ್, ಚೈನಿರ ಸವಿತ ನವೀನ್, ಕರಕಳ್ಳಿ ಮಾಲದೇವಯ್ಯ, ಕೆ.ಎಲ್. ನೂತನ್ ಹಾಗೂ ಪಿ.ಎಚ್. ಮಮತ ಕೊಡಗಿನ ಮೂಲದ ಆಟಗಾರರಾಗಿದ್ದರು.