ಸುಂಟಿಕೊಪ್ಪ, ಮೇ ೫: ೭ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಆರ್. ಮೆಹಬೂಬ್ ಖಾನ್ ಅವರನ್ನು ಶಿಕ್ಷಣ ಇಲಾಖೆ, ಶಾಲೆ ಮತ್ತು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಬಿಇಓ ಕೆ.ವಿ. ಸುರೇಶ್ ಅವರು ಮೆಹಬೂಬ್ ಖಾನ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಸನ್ಮಾನಿತರಾದ ಮೆಹಬೂಬ್ ಖಾನ್ ಮಾತನಾಡಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಕಾರ್ಯದರ್ಶಿ ಹೆಚ್.ಜಿ. ಕುಮಾರ್, ತಾಲೂಕು ಘಟಕದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಬಿಆರ್‌ಸಿ ಜಿ.ಎಂ. ಹೇಮಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್. ಕುಮಾರ್, ತಾಲೂಕು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ವಿರೂಪಾಕ್ಷ, ಇಸಿಓ ಕೆ.ಬಿ. ರಾಧಾಕೃಷ್ಣ, ವಿವಿಧ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಿ.ಎನ್. ಪುಷ್ಪ, ಟಿ.ಜಿ. ಪ್ರೇಮಕುಮಾರ್, ಕೆ.ಎಂ. ಅಯ್ಯಚ್ಚು, ಸೋಮಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ದಯಾನಂದ ಪ್ರಕಾಶ್, ತಾಲೂಕು ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ವಿರೂಪಾಕ್ಷ, ಸಿ.ಆರ್.ಪಿ. ಸೀಮಾ, ಶಿಕ್ಷಕರಾದ ಚಂದ್ರಹಾಸ ಮಾಯಾಗೌಡ, ಹೆಚ್.ಎಸ್. ರಾಜೇಶ್ವರಿ, ಟಿ.ವಿ. ಶೈಲಾ, ಬಿಂದುಕುಮಾರಿ, ಗಾಯತ್ರಿ ಇದ್ದರು.