ಸೋಮವಾರಪೇಟೆ, ಮೇ ೫: ಸಮೀಪದ ಕಿರಗಂದೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ರಘು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಳೆÀ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎ. ಕಾಳಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸಿಟಿಒ ಎಂ.ಎA. ನಾಣಿಯಪ್ಪ, ಉದ್ಯಮಿ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಶಾಲಾ ಮುಖ್ಯೋಪಾ ಧ್ಯಾಯ ಚಂದ್ರಾಚಾರಿ, ಕಿರಗಂದೂರು ಗ್ರಾಮಾಧ್ಯಕ್ಷ ಚಿದಾನಂದ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಎಸ್‌ಡಿಎಂಸಿ ಸಮಿತಿ ಅಧ್ಯಕ್ಷೆ ಶೈಲಾ ಪ್ರವೀಣ್, ಎಂ.ಎಸ್. ಕುಮಾರ್ ಮತ್ತಿತರರು ಇದ್ದರು.

ಈ ಸಂದರ್ಭ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಬಿಳಿಗೇರಿ ಚಂಗಪ್ಪ, ತಾಕೇರಿ ಅಕ್ಕಮ್ಮ, ಕಿರಗಂದೂರಿನ ಎಸ್.ಎಂ. ಕೃಷ್ಣಕಾಂತ್ ಸೇರಿದಂತೆ ಶಾಲೆಯಲ್ಲಿ ಕೆಲಸ ಮಾಡಿದ ಶಿಕ್ಷಕರು ಗಳನ್ನು, ಮಾಜಿ ಮತ್ತು ಹಾಲಿ ಸೈನಿಕರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ಮಾಧ್ಯಮ ಕ್ಷೇತ್ರ ಸೇರಿದಂತೆ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದವರನ್ನು ಸನ್ಮಾನಿಸಲಾಯಿತು.ಮತ್ತಿತರರು ಇದ್ದರು.

ಈ ಸಂದರ್ಭ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಬಿಳಿಗೇರಿ ಚಂಗಪ್ಪ, ತಾಕೇರಿ ಅಕ್ಕಮ್ಮ, ಕಿರಗಂದೂರಿನ ಎಸ್.ಎಂ. ಕೃಷ್ಣಕಾಂತ್ ಸೇರಿದಂತೆ ಶಾಲೆಯಲ್ಲಿ ಕೆಲಸ ಮಾಡಿದ ಶಿಕ್ಷಕರು ಗಳನ್ನು, ಮಾಜಿ ಮತ್ತು ಹಾಲಿ ಸೈನಿಕರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ಮಾಧ್ಯಮ ಕ್ಷೇತ್ರ ಸೇರಿದಂತೆ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದವರನ್ನು ಸನ್ಮಾನಿಸಲಾಯಿತು.