ಮಡಿಕೇರಿ, ಮೇ ೫: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನದಡಿ (ಡೇ ನಲ್ಮ್) ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಸೃಜಿಸಿ ಗೌರವ ಧನದ ಆಧಾರದ ಮೇಲೆ ಒಂದು ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ನಿಯುಕ್ತಿಗೊಳಿಸಲು ಅನುಮೋದನೆ ನೀಡಿದ್ದು, ಈ ಪ್ರಯುಕ್ತ ಮಾರ್ಗಸೂಚಿಯಂತೆ ಮಾಸಿಕ ಗೌರವಧನ ರೂ.೮ ಸಾವಿರ ಹಾಗೂ ಪ್ರಯಾಣ ಭತ್ಯೆ ಗರಿಷ್ಠ ರೂ.೨ ಸಾವಿರದಂತೆ ೩ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಯನ್ನು ನಗರಸಭೆ, ಪೌರಾಯುಕ್ತರ ಕಚೇರಿಯಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಾ. ೧೦ ರೊಳಗೆ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.
ಮಾರ್ಗಸೂಚಿಗಳು: ಸಂಪನ್ಮೂಲ ವ್ಯಕ್ತಿಯಾಗಿ ಅರ್ಜಿ ಸಲ್ಲಿಸುವವರು ಪ್ರದೇಶ ಮಟ್ಟದ/ ಸ್ವ ಸಹಾಯ ಸಂಘದ ಕನಿಷ್ಟ ೩ ವರ್ಷದ ಮಹಿಳಾ ಸದಸ್ಯರಿದ್ದು, ವಯೋಮಿತಿ ೧೮ ರಿಂದ ೪೫ ವರ್ಷದ ವಯೋಮಾನ ದವರಾಗಿರಬೇಕು. ಈ ಕುರಿತು ಸಂಘದ ಸದಸ್ಯತ್ವದ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ದ್ವಿತೀಯ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾಭ್ಯಾಸ ಹೊಂದಿದವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ಶೈಕ್ಷಣಿಕ ದಾಖಲಾತಿಯ ಪ್ರತಿ ಲಗತ್ತಿಸಬೇಕು. ಕನಿಷ್ಟ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ಈ ಕುರಿತು ಪ್ರಮಾಣ ಪತ್ರ ಲಗತ್ತಿಸಬೇಕು. ಅಭ್ಯರ್ಥಿಯು ಸ್ವ ಸಹಾಯ ಸಂಘದಿAದ ಸಾಲ ಪಡೆದು ಮರು ಪಾವತಿ ಮಾಡಿರಬೇಕು/ ಚಾಲ್ತಿಯಲ್ಲಿರಬೇಕು. ಸಂಘದಲ್ಲಿ ಪಡೆದ ಸಾಲ ಮರು ಪಾವತಿಸದೇ ಸುಸ್ತಿದಾರರಾಗಿರಬಾರದು. ಈ ಕುರಿತು ಸಂಘದಿAದ ದೃಢೀಕರಣ ಪತ್ರ ಲಗತ್ತಿಸಿರಬೇಕು. ಸಂಪನ್ಮೂಲ ವ್ಯಕ್ತಿಗಳು ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಈ ಕುರಿತು ಅಗತ್ಯ ದಾಖಲೆ ಲಗತ್ತಿಸಿರಬೇಕು. ಉತ್ತಮ ಸಂವಹನ ಕೌಶಲ್ಯ ಸೇವಾ ಮನೋಭಾವ ಹೊಂದಿರಬೇಕು. ಆಯ್ಕೆಯಾಗುವ ಸಂಪನ್ಮೂಲ ವ್ಯಕ್ತಿಗಳು ಸರ್ಕಾರ ಸೂಚಿಸುವ ಬೇರೆ ಬೇರೆ ಸ್ಥಳಗಳಲ್ಲಿ, ಜಿಲ್ಲೆಗಳಲ್ಲಿ, ಹೊರ ರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ದರಿರಬೇಕು. ಪಂಚಸೂತ್ರದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಸ್ವ ಸಹಾಯ ಸಂಘ ನಿರ್ವಹಿಸಬೇಕಾದ ಪುಸ್ತಕಗಳ ಹಾಗೂ ವಹಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು. ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಈ ಮೊದಲು ಅರ್ಜಿ ಸಲ್ಲಿಸಿದವರು ಮರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲವೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.