ಸಿದ್ದಾಪುರ, ಮೇ ೪: ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗ ದೇವಾಲಯ ಸಮೀಪದಲ್ಲಿರುವ ಮರವೊಂದರಲ್ಲಿ ಸಿಂಗಳೀಕ ತಳಿಯ ಮಂಗ ಮರದ ಮೇಲೆ ಕಂಡುಬAತು. ಈ ಅಪರೂಪದ ತಳಿಯ ಮಂಗವನ್ನು ಸಾರ್ವಜನಿಕರು ಕುತೂಹಲದಿಂದ ನೋಡಿದರು. ಕೆಲವರು ಇದರ ಚಿತ್ರವನ್ನು ಮೊಬೈಲಿನಲ್ಲಿ ಸೆರೆಹಿಡಿಯುವ ದೃಶ್ಯ ಕಂಡುಬAತು. ಶ್ರೀ ನವದುರ್ಗ ದೇವಾಲಯದ ಅರ್ಚಕ ವಿಶ್ವರೂಪ ಎಂಬವರ ಗೃಹಪ್ರವೇಶ ಇಂದು ನಡೆಯುತ್ತಿದ್ದು, ಈ ಸಂದರ್ಭ ಈ ಪ್ರಾಣಿಯು ಕಂಡುಬAದಿದ್ದು ವಿಶೇಷ.