ಮಡಿಕೇರಿ, ಮೇ ೫: ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ ೨೦೨೧-೨೨ ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುವ ಕಪ್ಪು ಬಣ್ಣದ (೨೫೦ ಜಿಎಸ್‌ಎಂ ಎಚ್‌ಡಿಪಿಇ ಟಾರ್ಪಲಿನ್ಸ್ ಕನ್‌ಪರ್ಮಿಂಗ್ ಟು ಐಎಸ್೭೯೦೩/೨೦೧೭ (ಟೈಪ್೧೧) ೮*೬ ಮೀ. ಟಾರ್ಪಾಲಿನ್‌ಗಳನ್ನು ಮೂರು ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಜಿಲ್ಲೆಯ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಅಗತ್ಯ ದಾಖಲಾತಿಗಳ (ಜಮೀನಿನ ಪಹಣಿ (ಆರ್‌ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ) ಪ್ರತಿಯನ್ನು ಅರ್ಜಿಯೊಂದಿಗೆ ನೀಡಿ ಸಹಾಯಧನದಲ್ಲಿ ಟಾರ್ಪಲ್ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು/ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

ಲಭ್ಯವಿರುವ ಟಾರ್ಪಲಿನ್‌ಗಳ ವಿವರ: ಮಡಿಕೇರಿ ತಾಲೂಕು ಕಸಬಾ ೧೮೬ (ಸಾಮಾನ್ಯ), ೧೪ (ಪರಿಶಿಷ್ಟ ಜಾತಿ), ನಾಪೋಕ್ಲು ೪೦೦ (ಸಾಮಾನ್ಯ), ಭಾಗಮಂಡಲ ೧೫೦ (ಸಾಮಾನ್ಯ), ಸಂಪಾಜೆ ೨೧೪ (ಸಾಮಾನ್ಯ). ಸೋಮವಾರಪೇಟೆ ತಾಲೂಕು ಕಸಬಾ ೨೦೨ (ಸಾಮಾನ್ಯ), ಕುಶಾಲನಗರ ೫೦೦ (ಸಾಮಾನ್ಯ), ೫೦ (ಪ.ಜಾತಿ), ೫೦ (ಪ.ಪಂ.), ಸುಂಟಿಕೊಪ್ಪ ೩೦೦ (ಸಾಮಾನ್ಯ), ಶನಿವಾರಸಂತೆ ೧೫೦ (ಸಾಮಾನ್ಯ), ಶಾಂತಳ್ಳಿ ೨೫೦ (ಸಾಮಾನ್ಯ), ಕೊಡ್ಲಿಪೇಟೆ ೧೫೦ (ಸಾಮಾನ್ಯ), ವೀರಾಜಪೇಟೆ ತಾಲೂಕು ಕಸಬಾ ೫೦ (ಸಾಮಾನ್ಯ), ೬ (ಪ.ಪಂ), ಪೊನ್ನಂಪೇಟೆ ೬೦ (ಸಾಮಾನ್ಯ), ೫ (ಪ.ಜಾತಿ), ೭ (ಪ.ಪಂ), ಅಮ್ಮತ್ತಿ ೨೦ (ಸಾಮಾನ್ಯ), ೯ (ಪ.ಜಾತಿ), ೭ (ಪ.ಪಂ.), ಬಾಳೆಲೆ ೩೦ (ಸಾಮಾನ್ಯ), ೯ (ಪ.ಜಾತಿ), ಹುದಿಕೇರಿ ೨೦ (ಸಾಮಾನ್ಯ), ೨ (ಪ.ಜಾತಿ) ಹಾಗೂ ಶ್ರೀಮಂಗಲ ೨೦ (ಸಾಮಾನ್ಯ).