ವೀರಾಜಪೇಟೆ, ಮೇ ೫: ಕೊಡಗಿನಲ್ಲೇ ಪ್ರಾಚೀನ ಚರ್ಚ್ ಸಂತ ಅನ್ನಮ್ಮ ದೇವಾಲಯವಾಗಿದ್ದು, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆಯನ್ನು ಪಡೆದಿದೆ ಎಂದು ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ. ಕೆ.ಎ. ವಿಲಿಯಂ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಐತಿಹಾಸಿಕ ಕ್ರೆöÊಸ್ತ ಸಂತ ಅನ್ನಮ್ಮ ದೇವಾಲಯದ ಸಮೀಪ ನಿರ್ಮಿಸಲಾದ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಈ ಸಮುದಾಯ ಭವನದ ನಿರ್ಮಾಣ ದಿಂದಾಗಿ ವೀರಾಜಪೇಟೆಯ ಭಾಗದ ಜನರಿಗೆ ಅನುಕೂಲವಾಗಿದೆ. ಇಲ್ಲಿನ ಧರ್ಮ ಕೇಂದ್ರದ ಗುರುಗಳಾದ ಫಾ. ಮದಲೈ ಮುತ್ತು ಅವರ ಪರಿಶ್ರಮದಿಂದ ಈ ವಿಶಾಲವಾದ ಸಮುದಾಯ ಭವನ ನಿರ್ಮಾಣ ವಾಗಿದೆ ಎಂದರು.

ಅರಮೇರಿ ಕಳಂಚೇರಿ ಮಠದ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳು ಕೊಡಗಿನ ಶಿಕ್ಷಣ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಇದೀಗ ಸಮುದಾಯ ಭವನದ ನಿರ್ಮಾಣದಿಂದ ಇಲ್ಲಿನ ಜನರ ಬಹು ದಿನಗಳ ನಿರೀಕ್ಷೆ ಈಡೇರುವಂತಾಗಿದೆ, ಜನರು ಮತ್ತು ಧರ್ಮಕೇಂದ್ರಗಳ ನಡುವೆ ಸಾಮರಸ್ಯ ಮೂಡಬೇಕಿದೆ, ಸಮಾಜದಲ್ಲಿ ಒಡಕನ್ನು ಹೋಗಲಾಡಿಸಬೇಕಾಗಿದೆ ಎಂದರು.

ಮೈಸೂರು ಧರ್ಮ ಪ್ರಾಂತ್ಯದ ಶ್ರೇಷ್ಠ ಗುರು ಫಾ. ಆಲ್ಫೆçಡ್ ಜಾನ್ ಮೆಂಡೋAಜಾ ಸಮುದಾಯ ಭವನದ ನಿರ್ಮಾಣಕ್ಕೆ ಸಹಕರಿಸಿದ ವರನ್ನು ಸ್ಮರಿಸಿದರು. ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರು ಫಾ. ಮದಲೈಮುತ್ತು ಮಾತನಾಡಿದರು.

ವೇದಿಕೆಯಲ್ಲಿ ಕೊಡಗು ಹಾಗೂ ಮೈಸೂರು ಭಾಗದ ವಿವಿಧ ಧರ್ಮಗುರುಗಳು ಹಾಜರಿದ್ದರು. ಚಾರ್ಲ್ಸ್ ಡಿಸೋಜಾ ಸ್ವಾಗತಿಸಿ, ಬೆನೆಡಿಕ್ಟ್ ಸಾಲ್ಡಾನ್ಹಾ ನಿರೂಪಿಸಿ, ಸಹಾಯಕ ಧರ್ಮಗುರು ರೆ. ಫಾ. ಲಿಯೋನಾರ್ಡ್ ವಂದಿಸಿದರು.