ಹಲವಾರು ರೋಗಗಳಂತೆ ಮೂತ್ರಪಿಂಡ ರೋಗವು ಒಂದು. ಮೂತ್ರಪಿಂಡಕ್ಕೆ ಸಂಬAಧಿಸಿದAತೆ ಹಲವು ರೋಗಗಳಿದ್ದರೂ, ಮೂತ್ರಪಿಂಡ ವೈಫಲ್ಯ ಮಾತ್ರ ಪ್ರಾಣಕ್ಕೆ ಕುತ್ತುತರಬಹುದು. ಎರಡು ಕಿಡ್ನಿಗಳ ವೈಫಲ್ಯದಿಂದ ದೇಹದಲ್ಲಿ ನೀರು ತುಂಬಿ, ಉಸಿರಾಟ ಕಷ್ಟವಾಗಿ, ಹೃದಯಕ್ಕೂ ಆಘಾತವಾಗಿ ಸಾವು ಹಲವು ವಿಧಗಳಲ್ಲಿ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳ ಪ್ರಾಣ ಉಳಿಸಲು ದೇಹದಲ್ಲಿ ಸಂಗ್ರಹವಾದ ನೀರಿನಾಂಶ, ನಿರರ್ಥಕ ಅಂಶಗಳನ್ನು ರಕ್ತದಿಂದ ಬೇರ್ಪಡಿಸಿ, ದೇಹದಲ್ಲಿ ಕಿಡ್ನಿ ನಿರ್ವಹಿಸಬೇಕಾಗಿರುವ ಕಾರ್ಯಗಳನ್ನು ಯಂತ್ರದ ಮೂಲಕ ಕೃತಕವಾಗಿ ಮಾಡುವುದೇ ಡಯಾಲಿಸಿಸ್. ಡಯಾಲಿಸಿಸ್ ಎಂದರೆ ರಕ್ತ ಶುದ್ಧೀಕರಣ ಎಂದೆನ್ನಬಹುದು. ಹೆಚ್ಚಿನವರಿಗೆ ಈ ಕಾಯಿಲೆಯ ಪರಿಚಯ ಇಲ್ಲ. ಈ ಡಯಾಲಿಸಿಸನ್ನು ವಾರಕ್ಕೆ ಅವಶ್ಯಕತೆಗನುಗುಣವಾಗಿ ಮಾಡಬೇಕಾಗುವುದು. ಅದರಲ್ಲೂ ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಕೆಲವರಿಗೆ ಮೂರು ಬಾರಿ ಚಿಕಿತ್ಸೆ ಮಾಡಬೇಕಾಗುತ್ತದೆ. ಹಲವರಿಗೆ ಇದು ಜೀವನ ಪರ್ಯಂತ ಮಾಡಬೇಕಾಗುವುದು. ಮೂತ್ರಪಿಂಡದ ಕಸಿ ಚಿಕಿತ್ಸೆ ಇದ್ದರೂ, ಮುಖ್ಯವಾದ ಸಾಮಾನ್ಯ ಚಿಕಿತ್ಸೆಯೆಂದರೆ ಅದು ಡಯಾಲಿಸಿಸ್. ಮೂತ್ರ ಪಿಂಡಗಳ ವೈಫಲ್ಯ ಅನುಭವಿಸುತ್ತಿರುವ ರೋಗಿಗಳಿಗೆ ಎರಡು, ಮೂರು ಇಲ್ಲ ಕೆಲ ದಿನಗಳ ಅವಧಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡದೇ ಹೋದರೆ ದೇಹದಲ್ಲಿ ನೀರು ತುಂಬಿ, ಉಸಿರಾಟಕ್ಕೆ ಕಷ್ಟವಾಗಿ ಪ್ರಾಣಹಾನಿಯಾಗಬಹುದು. ಈ ನಿಟ್ಟಿನಲ್ಲಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಮಡಿಕೇರಿ ಸರಕಾರಿ ಆಸ್ಪತ್ರೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಕೇಂದ್ರ ಅದೆಷ್ಟೋ ಮೂತ್ರಪಿಂಡ ವೈಫಲ್ಯ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಿ ಜೀವಕ್ಕಾಸರೆಯಾಗಿದೆ. ರೋಗಿಗಳಿಗೆ ಮಡಿಕೇರಿಯ ಡಯಾಲಿಸಿಸ್ ಕೇಂದ್ರ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ.
ಮಡಿಕೇರಿ ಡಯಾಲಿಸಿಸ್ ಕೇಂದ್ರ: ಇಲ್ಲಿ ಒಟ್ಟು ಒಂಭತ್ತು ಯಂತ್ರಗಳಿವೆ. ಇವುಗಳಲ್ಲಿ ಮೂರು ಬ್ಯಾಚ್ಗಳಲ್ಲಿ ಒಂದು ಬಾರಿಗೆ ಒಂಭತ್ತು ಜನರಿಗೆ, ನಾಲ್ಕು ಗಂಟೆಗಳ ಕಾಲ ಸಾಮಾನ್ಯವಾಗಿ ಡಯಾಲಿಸಿಸ್ನ್ನು ಮಾಡಲಾಗುತ್ತದೆ. ಒಂದು ದಿನಕ್ಕೆ ೨೫ ರಿಂದ ೨೭ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಆರು ಜನ ನರ್ಸಿಂಗ್ ಆಫೀಸರ್ಸ್ ಇದ್ದು, ಓರ್ವ ಟೆಕ್ನಿಷಿಯನ್ ಇದ್ದು, ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಕರೆಂಟ್ ಇಲ್ಲದ ಸಂದರ್ಭ ಜನರೇಟರ್ ವ್ಯವಸ್ಥೆಯೂ ಇದೆ. ಸ್ಥಳಾವಕಾಶ, ನೀರಿನ ವ್ಯವಸ್ಥೆ ಇದ್ದು, ಸುಸಜ್ಜಿತವಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಔಷಧಿ ಇನ್ನಿತರ ಅವಶ್ಯಕತೆಗಳನ್ನು ಪೂರೈಸುತ್ತಿದೆ.
ಡಯಾಲಿಸಿಸ್ ಸೇವೆ: ಇಲ್ಲಿಗೆ ಕುಶಾಲನಗರ, ಮಡಿಕೇರಿ, ಚೆಟ್ಟಳ್ಳಿ, ನಾಪೋಕ್ಲು, ಭಾಗಮಂಡಲ, ಮೂರ್ನಾಡು, ಮದೆನಾಡು ಮುಂತಾದ ಕಡೆಯಿಂದ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಬರುತ್ತಾರೆ. ಡಯಾಲಿಸಿಸ್ ಸೇವೆ, ಔಷಧಿಗಳು ಉಚಿತವಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ವರದಾನವಾಗಿದೆ. ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಹೆಸರು ನೋಂದಾವಣೆ ಮಾಡಬೇಕು. ಇದರಿಂದ ಚಿಕಿತ್ಸೆಗೆ ದಾಖಲಾಗಬಹುದು.
ನಗುಮುಖದ ಸೇವೆ: ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಸಂದರ್ಭಗಳಲ್ಲಿ ಕೆಲವು ಬಾರಿ ಕಡಿಮೆ ರಕ್ತದ ಒತ್ತಡ, ಹೆಚ್ಚಿನ ರಕ್ತದ ಒತ್ತಡ ಇನ್ನಿತರ ತೊಂದರೆಗಳು ಸಂಭವಿಸುವ ಸಂದರ್ಭಗಳಲ್ಲಿ ಇಲ್ಲಿಯ ನರ್ಸಿಂಗ್ ಆಫೀಸರ್ಸ್ ಮತ್ತು ಸಿಬ್ಬಂದಿ ಜಾಗರೂಕತೆಯಿಂದ ನಗುಮುಖದ ಉತ್ತಮ ಸೇವೆ ನೀಡುತ್ತಾರೆ.
ಮೂತ್ರಪಿಂಡ ತಜ್ಞರಿಲ್ಲ: ಮಡಿಕೇರಿಯ ಡಯಾಲಿಸಿಸ್ ಕೇಂದ್ರ ಹಾಗೂ ಮಡಿಕೇರಿ ಹಾಗೂ ಕೊಡಗಿನಲ್ಲಿ ಮೂತ್ರಪಿಂಡ ತಜ್ಞರು ಇಲ್ಲದೇ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ತುರ್ತು ಸಂದರ್ಭದಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ಮೂತ್ರಪಿಂಡ ತಜ್ಞರ ಅವಶ್ಯಕತೆ ಬಹಳಷ್ಟಿದ್ದು, ಚಿಕಿತ್ಸೆಗಾಗಿ ದೂರದ ಮೈಸೂರು, ಬೆಂಗಳೂರು, ಮಂಗಳೂರಿಗೆ ತೆರಳಬೇಕಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಈ ಸಮಸ್ಯೆ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಸಂಬAಧಿಸಿದವರು ತುರ್ತು ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಚಿಕಿತ್ಸೆಗಾಗಿ ದೂರ ತೆರಳುವುದು ವೆಚ್ಚದಾಯಕ.
ಇನ್ನಷ್ಟು ಡಯಾಲಿಸಿಸ್ ಕೇಂದ್ರಗಳ ಅವಶ್ಯಕತೆ: ನಾಪೋಕ್ಲು, ಕುಶಾಲನಗರ ಇನ್ನು ಕೆಲವೆಡೆ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ದೂರದ ಮಡಿಕೇರಿ, ಸೋಮವಾರಪೇಟೆ ಮುಂತಾದ ಕಡೆ ಪ್ರಯಾಣಿಸುವುದು ರೋಗಿಗಳಿಗೆ ತ್ರಾಸದಾಯಕವು, ವೆಚ್ಚದಾಯಕವು ಆಗಿದೆ.
ರೋಗಿಗಳ ಸೇವೆಯಲ್ಲಿ ಮಡಿಕೇರಿಯ ಡಯಾಲಿಸಿಸ್ ಕೇಂದ್ರದ ಸೇವೆ ನಿಜಕ್ಕೂ ಶ್ಲಾಘನೀಯ. ಜನಪ್ರತಿನಿಧಿಗಳು ತಿಂಗಳಿಗೊಮ್ಮೆ ಭೇಟಿ ನೀಡಿ ರೋಗಿಗಳ ಹಾಗೂ ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಿ, ಪರಿಹರಿಸುವಂತಾಗಲಿ. ರೋಗಿಗಳಿಗೆ ಇನ್ನೂ ಹೆಚ್ಚು ಸೇವೆ ಲಭಿಸುವಂತಾಗಲಿ.
- ಹರೀಶ್ ಸರಳಾಯ, ಮಡಿಕೇರಿ