ಕೂಡಿಗೆ, ಮೇ ೫: ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿಯ ಅಚ್ಚುಕಟ್ಟು ವ್ಯಾಪ್ತಿಯ ತೊರೆನೂರು ಗ್ರಾಮ ಮುಖ್ಯ ರಸ್ತೆಯ ಕಾಮಗಾರಿಗೆ ರೂ. ೨೧ ಕೋಟಿ ಹಣ ನೀರಾವರಿ ಇಲಾಖೆಯ ವತಿಯಿಂದ ಮಂಜೂರಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಳೆದ ತಿಂಗಳಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು. ಅದರಂತೆ ಇದೀಗ ಕಾಮಗಾರಿಯು ಆರಂಭವಾಗಿ ರಸ್ತೆಗೆ ಕಾಂಕ್ರೀಟ್ ಹಾಕುವ ಕೆಲಸ ಪ್ರಾರಂಭವಾಗಿದೆ.

ರಸ್ತೆಯ ಕಾಮಗಾರಿಯು ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಗ್ರಾಮದ ಮುಖ್ಯ ರಸ್ತೆ ಮತ್ತು ಇದರ ಜೊತೆಯಲ್ಲಿ ತೊರೆನೂರು ಮತ್ತು ಬಾಣವಾರ ಸಂಪರ್ಕ ರಸ್ತೆಯಾದ ಬೈರಪ್ಪನಗುಡಿ- ಅಳುವಾರ ರಸ್ತೆಯ ಕಾಮಗಾರಿಯು ಆರಂಭಗೊAಡಿದ್ದು ಕಾಮಗಾರಿಯು ಪ್ರಗತಿಯತ್ತ ಸಾಗುತ್ತಿದೆ. ಹಾರಂಗಿಯ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಗುತ್ತಿಗೆದಾರರ ಇಂಜಿನಿಯರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.