ಮಡಿಕೇರಿ, ಮೇ ೩: ಭಾಗಮಂಡಲ ಸಂಗಮದ ಬಳಿ ಹಲವು ವರ್ಷಗಳಿಂದ ನಿರ್ಗತಿಕರಾಗಿ ಅಲೆದಾಡು ತ್ತಿದ್ದವರನ್ನು ಸಿಂಗತ್ತೂರು ಗ್ರಾಮದ ಉದ್ಯಮಿ, ಸಮಾಜ ಸೇವಕರೂ ಆಗಿರುವ ಬೆಪ್ಪುರನ ಅವಿನಾಶ್ ಕೇಸರಿ ಅವರು ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸಿದರು.
ಭಾಗಮಂಡಲ ಗ್ರಾಮ ಪಂಚಾಯಿತಿಯವರು, ಶ್ರೀ ಭಗಂಡೇಶ್ವರ ದೇವಾಲಯ ಸಮಿತಿಯವರು ಹಾಗೂ ಮಡಿಕೇರಿ ನಗರಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್ ಅವರುಗಳು ಸಹಕಾರ ನೀಡಿದರು.