ಮಡಿಕೇರಿ, ಮೇ ೩: ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಶತಮಾನ ಭವನದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಿತು.

ಪರಿಷದ್‌ನ ಮಂಗಳೂರು ವಿಭಾಗದ ಸಹ ಕಾರ್ಯದರ್ಶಿ ದೇವಿ ಪ್ರಸಾದ್ ಧಾರ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಹಿಂದೂ ಸಮಾಜ ಒಂದಾಗುತ್ತದೆ. ಇದಕ್ಕೆ ಸ್ವಾತಂತ್ರö್ಯ ಹೋರಾಟ ಸಾಕ್ಷಿಯಾಗಿದೆ. ಹಿಂದೂ ಬಾಂಧವರು ಧಾರ್ಮಿಕ ಕಾರ್ಯ ಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ದೇವತಾ ಕಾರ್ಯಗಳು ಸಾಮಾಜಿಕ ಸಮಿಲನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಈ ಸಂದರ್ಭ ವಿ.ಹಿಂ.ಪ. ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಮಡಿಕೇರಿ ನಗರಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ನಗರ ಕಾರ್ಯದರ್ಶಿ ಸುಧೀಂದ್ರ, ಪ್ರಮುಖರಾದ ರಮೇಶ್, ಸುರೇಶ್ ಮುತ್ತಪ್ಪ, ಕವನ್ ಕಾವೇರಪ್ಪ, ಅಜಿತ್, ಅನೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಶೃತಿಲಯ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು. ೬೦೦ಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು.