ಚೆಟ್ಟಳ್ಳಿ, ಮೇ ೩: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾದ ಅಧೀನದಲ್ಲಿ ೨೦೨೧-೨೨ನೇ ಸಾಲಿನ ೫, ೭, ೧೦ ಮತ್ತು ೧೨ನೇ ತರಗತಿಗಳ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ೯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಜಿಲ್ಲೆಯಿಂದ ೨,೮೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ೧೨ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಮುಡಿ ಆಝಾದ್ ನಗರ ಮದರಸ ವಿದ್ಯಾರ್ಥಿಗಳಾದ ತಂಝೀಹ ಕೆ.ಎ. ಹಾಗೂ ನಜ್ಮುನ್ನಿಸಾ ಸಿ.ಐ, ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೆಲ್ಲಿಹುದಿಕೇರಿ ಮದರಸ ವಿದ್ಯಾರ್ಥಿ ಆಫೀಫಾ ತೃತೀಯ ಸ್ಥಾನವನ್ನು ಪಡೆದುಕೊಂಡರು. ೧೦ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಹುಂಡಿ ಗ್ರಾಮದ ಮದರಸ ವಿದ್ಯಾರ್ಥಿ ಸಜ್ನಾ ಪಿ.ಎಸ್. ಹಾಗೂ ನಾಪೋಕ್ಲು ಸಮೀಪದ ಕುಂಜಿಲ ಮದರಸ ವಿದ್ಯಾರ್ಥಿ ಝರೀನಾ ಪಿ.ಇ. ಪ್ರಥಮ ಸ್ಥಾನ ಗಳಿಸಿದ್ದಾರೆ. ಗರಗಂದೂರು ಮದರಸ ವಿದ್ಯಾರ್ಥಿ ಅಫೀಫಾ ಪಿ.ಹೆಚ್. ಹಾಗೂ ಫಾತಿಮತ್ ಶೈಮಾ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡರು.

೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾಪೋಕ್ಲು ಸಮೀಪದ ಬಾವಲಿ ಕಿಕ್ಕರೆ ಗ್ರಾಮದ ಮದರಸ ವಿದ್ಯಾರ್ಥಿಗಳಾದ ರಹೀಸಾ ಕೆ.ಆರ್. ಹಾಗೂ ನುಸೈಬಾ ಕೆ.ಎ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು. ಹೊದ್ದೂರು ಸಮೀಪದ ಕಬಡಕೇರಿ ಮದರಸ ವಿದ್ಯಾರ್ಥಿ ಫಿಧಾ ಫಾತಿಮಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

೫ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾಪೋಕ್ಲು ಮದರಸ ವಿದ್ಯಾರ್ಥಿಗಳಾದ ಅಝ್ಮಿಯಾ ಹಾಗೂ ಫಾತಿಮ ಲಿಯಾ ನಝ್ಮಿನ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡರು. ಕೊಂಡAಗೇರಿ ಮದರಸ ವಿದ್ಯಾರ್ಥಿ ಅಸ್ನಾಅಮ ತೃತೀಯ ಸ್ಥಾನವನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಸುನ್ನಿ ಜಂಮ್ಮಿಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ.) ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.