ಭಾಗಮಂಡಲ, ಮೇ ೩: ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ೨೦೨೧- ೨೨ರ ಸಾಲಿನ ವಾರ್ಷಿಕ ಕ್ರೀಡಾಕೂಟ ತಾ. ೭ ಮತ್ತು ೮ ರಂದು ಭಾಗಮಂಡಲದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಗೊಲ್ಲ ಸಮಾಜ ಕ್ರೀಡಾ ಸಮಿತಿ ಅಧ್ಯಕ್ಷ ಕಡವಡಿರ ಸಂತೋಷ್, ಕ್ರೀಡಾ ಸಮಿತಿ ಉಪಾಧ್ಯಕ್ಷ ಅರೆಯಂಡ ಕುಶಾಲಪ್ಪ ಮತ್ತು ಕಾರ್ಯದರ್ಶಿ ಪೊನ್ನುಕಂಡ ತೀರ್ಥ ತಮ್ಮಯ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.

ವಾರ್ಷಿಕ ಕ್ರೀಡಾಕೂಟದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಅಂತಿಮ ಕ್ರಿಕೆಟ್ ಪಂದ್ಯಾಟವನ್ನು ಶಿವಮೊಗ್ಗದ ಪೊಲೀಸ್ ಇನ್ಸ್ಪೆಕ್ಟರ್ ಅರೆಯಂಡ ಮೊಣ್ಣಪ್ಪ, ಜಿಲ್ಲಾ ಖಜಾನೆಯ ನಿವೃತ್ತ ಅಧಿಕಾರಿ ಕೊಂಗಿರ ಪೂಣಚ್ಚ, ವಾಣಿಜ್ಯ ತೆರಿಗೆ ಇಲಾಖೆಯ ಬಿದ್ದಿಯಂಡ ಬಾನು ಮಾಚಯ್ಯ, ಸೈನಿಕ ಪೊಂಗೆರ ಪ್ರಕಾಶ್, ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷೆ ಪೊನ್ನುಕಂಡ ಚಿತ್ರ ಮೊಣ್ಣಪ್ಪ ಹಾಗೂ ಉಪಾಧ್ಯಕ್ಷ ಅರೆಯಡ ಭೀಮಯ್ಯ ಉಪಸ್ಥಿತರಿರುವರು ಎಂದು ಆಯೋಜಕರು ತಿಳಿಸಿದ್ದಾರೆ.