ಮಡಿಕೇರಿ, ಮೇ ೩: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಮೈಸೂರು ವಿಭಾಗಕ್ಕೆ ಕೆ. ಕರಿಯಪ್ಪ ನೇಮಕವಾಗಿದ್ದಾರೆ.

ಜಿಲ್ಲಾ ಪಂಚಾಯಿತಿಯ ಮೊದಲನೇ ಮಹಡಿಯಲ್ಲಿ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಕಚೇರಿಯನ್ನು ತೆರೆಯಲಾಗಿದ್ದು, ದೂರುಗಳಿದ್ದಲ್ಲಿ ಸಾರ್ವಜನಿಕರು ಕಚೇರಿಗೆ ಸಲ್ಲಿಸಬಹುದಾಗಿದೆ. ಗ್ರಾ.ಪಂ., ತಾ.ಪಂ., ಜಿ.ಪಂ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕುಂದುಕೊರತೆ ಸಂಬAಧಿಸಿದAತೆ ೮೪೩೧೫೬೨೨೮೧, ೯೪೪೮೭೬೮೯೮೬ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕರಿಯಪ್ಪ ತಿಳಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕುಂದುಕೊರತೆ ನಿವಾರಣಾ ಪ್ರಾಧಿಕಾರವು ದೂರನ್ನು ಸ್ವೀಕರಿಸಿದ ದಿನಾಂಕದಿAದ ತೊಂಬತ್ತು ದಿನಗಳು. ಮೀರದ ಸಮಯದ ಚೌಕಟ್ಟಿನಲ್ಲಿ ತೊಂದರೆಯನ್ನು ಪರಿಹರಿಸಲಾಗಿದೆ. ಅಥವಾ ತೊಂದರೆಯು ಆಗಿರುವ ಕಾರಣವನ್ನು ಗುರುತಿಸುವುದು ಮತ್ತು ತಪ್ಪಿತಸ್ಥ ಅಧಿಕಾರಿ ಅಥವಾ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ಹೊರಿಸುವುದು ಮತ್ತು ನಿರ್ಧಿಷ್ಟಪಡಿಸಿದ ಅವಧಿಯ ತರುವಾಯ ಒಂದು ತಿಂಗಳೊಳಗೆ ಕುಂದುಕೊರತೆಯನ್ನು ಸಮಾಧಾನಕರವಾಗಿ ಪರಿಹರಿಸಲಾಗಿದೆ. ಅಧಿಕಾರಿ ಅಥವಾ ವ್ಯಕ್ತಿಯ ಅಸಮರ್ಥತೆ, ನಿರ್ಲಕ್ಷö್ಯ ಅಥವಾ ದುಷ್ಕೃತ್ಯದ ಪರಿಣಾಮವಾಗಿ ತೊಂದರೆಯಾಗಿದ್ದಲ್ಲಿ ಕ್ರಮವನ್ನು ನಡತೆ ನಿಯಮಗಳು ಮತ್ತು ಇಲಾಖಾ ಪ್ರಕ್ರಿಯೆಗಳ ಅನುಸಾರವಾಗಿ ನಡೆಸಲಾಗಿದೆ, ಅಥವಾ ಸರಕುಗಳ ಮತ್ತು ಸೇವೆಗಳನ್ನು ನೀಡಲು ಜವಾಬ್ದಾರನಾದ ವ್ಯಕ್ತಿಯು ಬೇಕಾಗಿಯೇ ಸರಕು ಅಥವಾ ಸೇವೆಯನ್ನು ಒದಗಿಸಲು ನಿರ್ಲಕ್ಷಿಸಿರುವ ಅಥವಾ ಭ್ರಷ್ಟಾಚಾರ ತಡೆಗಟ್ಟುವ ಅಧಿನಿಯಮ, ೧೯೮೮ ರ ಅಡಿಯಲ್ಲಿ ಪ್ರಕರಣದ ಮೇಲ್ನೋಟದಲ್ಲೇ ಆಧಾರಗಳು ಇದ್ದಾಗ ಆ ಮಟ್ಟಿಗೆ ವಿಧಿಸಬೇಕಾದ ದಂಡದ ಶಿಫಾರಸ್ಸಿನೊಂದಿಗೆ ಪ್ರಧಾನ ಕಾರ್ಯದರ್ಶಿ ಅಥವಾ ಸಂದರ್ಭನುಸಾರವಾಗಿ ಸರ್ಕಾರದ ಕಾರ್ಯದರ್ಶಿಗೆ ಆತನು ಅವಲೋಕನ ಮಾಡುವುದನ್ನು ಒಳಗೊಳ್ಳುತ್ತದೆ.

“ಕುಂದು ಕೊರತೆ" ಎಂದರೆ ನೀರು ಸರಬರಾಜು, ಆರೋಗ್ಯ ನಿರ್ವಹಣೆ:, ರಸ್ತೆ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಯಾವುದೇ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು, ಯಾವುದೇ ಯೋಜನೆಯ ಪ್ರಯೋಜನದ ಹಂಚಿಕೆ, ನೈರ್ಮಲೀಕರಣ ನಿರ್ವಹಣೆ, ಯಾವುದೇ ದಸ್ತಾವೇಜುಗಳು ಅಥವಾ ಪ್ರಮಾಣಪತ್ರವನ್ನು ಮಂಜೂರು ಮಾಡುವುದು ಅಥವಾ ಹೊರಡಿಸುವುದು. ನಿಯಮಿಸಬಹುದಾದ ಯಾವುದೇ ಇತರ ವಿಷಯ ಇವುಗಳ ಸಂಬAಧದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ತೆಗೆದುಕೊಳ್ಳುವ ಕ್ರಿಯೆಯನ್ನು ಮಾಡುವುದರಿಂದ ಅಥವಾ ಬಿಟ್ಟುಬಿಡುವುದರ ಕುರಿತು ಬಾಧಿತನಾದ ನಾಗರಿಕನು ನೀಡುವ ಯಾವುದೇ ದೂರನ್ನು ಇದು ಒಳಗೊಳ್ಳುತ್ತದೆ.