ಪೊನ್ನಂಪೇಟೆ, ಮೇ ೨ : ಪೊನ್ನಂಪೇಟೆಯ ನಿಸರ್ಗ ನಗರದಲ್ಲಿ ಭಾರಿ ಗಾಳಿ ಮಳೆಗೆ ಹಾನಿಗೊಳಗಾಗಿದ್ದ ಜಮ್ಮಡ ಮನು ಎಂಬವರ ಮನೆಗೆ ಶಾಸಕ ಕೆ.ಜಿ. ಬೋಪಯ್ಯನವರು ಭೇಟಿ ನೀಡಿ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ೪ ಕುಟುಂಬಗಳಿಗೆ ಸಾಂತ್ವನ ಹೇಳಿದರು. ತಹಶೀಲ್ದಾರ್ ಅವರ ಜೊತೆಯಲ್ಲಿ ಮಾತನಾಡಿ, ಮನೆ ದುರಸ್ತಿ ಆಗುವವರೆಗೆ ತಾತ್ಕಾಲಿಕವಾಗಿ ಸಂತ್ರಸ್ತ ಕುಟುಂಬಗಳಿಗೆ ವಾಸಕ್ಕೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ, ಮೂಕಳೇರ ಮಧುಕುಮಾರ್, ಪೊನ್ನಂಪೇಟೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಕೋಟೆರ ಕಿಶನ್, ಕಾರ್ಯಕರ್ತ ವಿಜು ಇದ್ದರು.