ವೀರಾಜಪೇಟೆ ಮೇ. ೨: ತಾಯಂದಿರು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದಾಗ ಅದು ದೇಶÀಕ್ಕೆ ಮಹತ್ವದ ಕೊಡುಗೆÀಯಾಗಲಿದೆ, ಇಲ್ಲಿ ಸಂಘಟನೆಗಳ ಪಾತ್ರವು ಹಿರಿದಾಗಿರುತ್ತದೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ವೀರಾಜಪೇಟೆಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೊಡಗು ಹಿಂದೂ ಮಲಯಾಳಿ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ತಾಯಂದಿ ಯರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸ್ವಾವಲಂಬಿ ಸ್ವಾಭಿಮಾನಿ ಎಂಬ ಪರಿಕಲ್ಪನೆಯೊಂದಿಗೆ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ತಿçà ಶಕ್ತಿಗಳ ಒಕ್ಕೂಟ ರಚನೆಗೆ ಒತ್ತು ನೀಡಿದರು. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಅವಕಾಶ ದೊರಕಿತು. ಅಲ್ಲದೆ ತಾಯಂದಿರಿಗೆ ಮಾತ್ರ ತಮ್ಮ ಆಚಾರ ವಿಚಾರ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಸಾಧ್ಯ. ವಿವಿಧ ಆಚಾರ ಸಂಸ್ಕೃತಿಯನ್ನು ಸಮಾನವಾಗಿ ಕಂಡಾಗ ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ನಾವು ಬೇರೆ ಧರ್ಮದ ಬಗ್ಗೆ ಮಾತನಾಡದೆ ತನ್ನತನವನ್ನು ತನ್ನ ಧರ್ಮವನ್ನು ಉಳಿಸಿಕೊಂಡು ಒಂದಾಗಿ ಒಗ್ಗಟ್ಟಾಗಿ ಮುನ್ನಡೆಯ ಬೇಕು ಎಂದು ಬೋಪಯ್ಯ ಹೇಳಿದರು.
ಕೆಪಿಸಿಸಿ ಸದಸ್ಯ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ ತಾಯಿ ಎಂಬ ಪದಕ್ಕೆ ಒಂದು ವಿಶಿಷ್ಠ ಸ್ಥಾನವಿದೆ ಹಾಗೂ ಭಾವನಾತ್ಮಕತೆ ಇದೆ. ನೂರಾರು ಗುಡಿಯ ದೇವರಿಗಿಂತ ಮನೆಯಲ್ಲಿರುವ ತಾಯಿಗೆ ನಾವು ಶಿರಭಾಗಿದರೆ ಸಾಕು. ವಯೋಸಹಜವಾಗಿ ಹಿರಿಯರು ಮಕ್ಕಳಂತೆ ಹಠ ಹಿಡಿಯುತ್ತಾರೆ. ತೋಚಿದನ್ನು ಮಾತನಾಡುತ್ತಾರೆ. ನಾವು ಅದನ್ನು ಮನ್ನಿಸಿ ಅವರನ್ನು ಪೋಷಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭಾ ಸದಸ್ಯ ಹಾಗೂ ಕೊಡಗು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ರಮೇಶ್ , ಜಿಲ್ಲಾ ಎಸ್.ಎನ್.ಡಿ.ಪಿ ಅಧ್ಯಕ್ಷ ಲೋಕೇಶ್, ಅಂರ‍್ರಾಷ್ಟಿçÃಯ ರಗ್‌ಬಿ ಆಟಗಾರ ಮಾದಂಡ ತಿಮ್ಮಯ್ಯ, ಆರ್ಜಿ ಗ್ರಾ.ಪಂ ಸದಸ್ಯೆ ಸುನಿತ ಹರಿದಾಸ್, ಮಾಜಿ ಜಿ.ಪಂ ಸದಸ್ಯೆ ಸುನಿತ, ಚೈತನ್ಯ ಮಠಪುರದ ಅಧ್ಯಕ್ಷ ಟಿ.ಕೆ ರಾಜನ್, ಓಣಂ ಸಮಿತಿ ಅಧ್ಯಕ್ಷ ಟಿ.ಕೆ ಪದ್ಮನಾಭ, ಪ.ಪಂ ಸದಸ್ಯ ಸಿ.ಕೆ ಪ್ರಥ್ವಿನಾಥ್ ಉಪಸ್ಥಿತರಿದ್ದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಭಾ ಪ್ರಥ್ವಿನಾಥ್ ಅಧ್ಯಕ್ಷತೆ ವಹಿಸಿದ್ದರು, ಪ್ರಾಸ್ತಾವಿಕವಾಗಿ ಒಕ್ಕೂಟದ ಸದಸ್ಯೆ ಬಿಂದು ಮಾತನಾಡಿದರು. ಇದೇ ಸಂದರ್ಭ ತಿರುವಾದಿ ನೃತ್ಯ ಪ್ರದರ್ಶನ ನಡೆಯಿತು. ಈ ಸಮಾರಂಭದಲ್ಲಿ ೨೭ ಜನ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.. ಅಪರಾಹ್ನದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.