ಗೋಣಿಕೊಪ್ಪ ವರದಿ, ಮೇ ೨: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಭಾನುವಾರ ಆರಂಭಗೊAಡ ಲೀಗ್ ಟೂರ್ನಿಯಲ್ಲಿ ನಾಪೋಕ್ಲು ಶಿವಾಜಿ, ಮಲೆನಾಡ್, ಈಶ್ವರ ಯೂತ್ಕ್ಲಬ್, ನಾಲಡಿ, ಕುಂದ ಹಾಗೂ ಕೋಣನಕಟ್ಟೆ ತಂಡಗಳು ಗೆಲುವಿನ ನಗೆ ಬೀರಿದವು.
ನಾಲಡಿ ತಂಡವು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಪ್ರೀತಂ, ಕೆ. ಬೋಪಣ್ಣ, ಪ್ರಜ್ವಲ್, ತನುಶ್ ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ನಾಪೋಕ್ಲು ಶಿವಾಜಿ ತಂಡವು ಬೇರಳಿನಡ್ ಯುಸಿಜಿ ತಂಡದ ವಿರುದ್ದ ೨-೦ ಗೊಲುಗಳ ಜಯ ಸಾಧಿಸಿತು. ನಾಪೋಕ್ಲು ತಂಡದ ಆಟಗಾರ ಶುಭಂ, ನಾಚಪ್ಪ ತಲಾ ಒಂದೊAದು ಗೋಲು ಹೊಡೆದು ಮಿಂಚಿದರು.
ಈಶ್ವರ ಯೂತ್ಕ್ಲಬ್ ತಂಡವು ಮೂರ್ನಾಡು ಫೀಲ್ಡ್ ಮಾರ್ಷಲ್ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಈಶ್ವರ ತಂಡದ ಪರ ಎಂ. ಎಸ್. ಬೋಪಣ್ಣ, ಎಂ. ಟಿ. ದೀಪಕ್ ಗೋಲು ಬಾರಿಸಿದರು. ಮಲೆನಾಡ್ ತಂಡವು ಅಮ್ಮತ್ತಿ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಅಮ್ಮತ್ತಿ ತಂಡದ ದೇವಯ್ಯ, ಮ್ಯಾಕ್ಸ್, ಮಲೆನಾಡ್ ತಂಡದ ಸುಬ್ಬಯ್ಯ ೨, ಶಾನ್ ೧ ಗೋಲು ಹೊಡೆದರು.
ಕುಂದ ತಂಡವು ಶಿವಾಜಿ (ಬಿ) ತಂಡದ ವಿರುದ್ಧ ೨-೧ ಗೋಲುಗಳ ಜಯ ಸಾಧಿಸಿತು. ಕುಂದ ತಂಡದ ಆಟಗಾರ ಸುದೇಶ್, ಸಿ. ಬೋಪಣ್ಣ, ಶಿವಾಜಿ ತಂಡದ ಸುಬ್ಬಯ್ಯ ಗೋಲು ಹೊಡೆದರು. ಕೋಣನಕಟ್ಟೆ ತಂಡವು ಬಲಮುರಿ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಪುಚ್ಚಿಮಾಡ ಯಶ್ವಂತ್, ಇಟ್ಟೀರ ಅಚ್ಚಪ್ಪ ಗೋಲು ಹೊಡೆದರು.