ಶನಿವಾರಸಂತೆ, ಮೇ ೨: ಸಾರ್ವಜನಿಕ ರಸ್ತೆ ಬದಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಕಲಗೋಡು ಗ್ರಾಮದ ಪರಮಶಿವಯ್ಯ ಬಂಧಿತ ಆರೋಪಿ. ಈತ ಸರ್ಕಾರದ ಪರವಾನಗಿ ಇಲ್ಲದೆ ನಾಕಲಗೋಡಿನ ರಸ್ತೆ ಬದಿ ಮದ್ಯದ ಪ್ಯಾಕೆಟ್‌ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಅನ್ವಯ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಪಿಎಸ್‌ಐ ಗೋವಿಂದ ರಾಜ್, ಹೆಡ್ ಕಾನ್ಸ್ಟೇಬಲ್ ಮಹೇಶ್, ಸಿಬ್ಬಂದಿ ಲೋಕೇಶ್ ಹಾಗೂ ಮುರಳಿ ಸ್ಥಳಕ್ಕೆ ಧಾವಿಸಿದರು.
ಪೊಲೀಸರನ್ನು ನೋಡಿ ಮದ್ಯ ಕುಡಿಯುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾಗಿದ್ದಾರೆ. ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿದ್ದ ಪರಮಶಿವಯ್ಯನನ್ನು ಸ್ಥಳದಲ್ಲಿದ್ದ ಸ್ವತ್ತುಗಳ ಸಹಿತ ಬಂಧಿಸಿ ಠಾಣೆಗೆ ಹಾಜರುಪಡಿಸಿ ಪ್ರಕರಣ ದಾಖಲಿಸಿರುತ್ತಾರೆ.