ಚೆಯ್ಯಂಡಾಣೆ, ಮೇ ೨: ಇಲ್ಲಿಗೆ ಸಮೀಪದ ಚೇಲಾವರ ಭಗವತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. ೬ರಿಂದ ತಾ.೮ರವರೆಗೆ ನಡೆಯಲಿದೆ. ತಾ. ೬ರಂದು ಸಂಜೆ ಸಾಮೂಹಿಕ ಪ್ರಾರ್ಥನೆ ಆಚಾರ್ಯವರ್ಣ ಪ್ರಸಾದ ಶುದ್ಧಿ, ವಾಸ್ತು ಹೋಮ, ರಾಕ್ಷೆÆÃಘ್ನ ಮಹಾಪೂಜೆ, ಅಂಕುರಾರ್ಪಣೆ, ತಾ. ೭ರಂದು ಬೆಳಿಗ್ಗೆ ಪುಣ್ಯಾಹವಾಚನ, ಗಣಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಬಿಂಬ ಶುದ್ಧಿ, ದುರ್ಗಾಹೋಮ, ಅಂಕುರಾರ್ಪಣೆ ಮಹಾಪೂಜೆ, ಸಂಜೆ ದುರ್ಗಾಪೂಜೆ, ಬ್ರಹ್ಮ ಕಲಶ ಪ್ರತಿಷ್ಠಾ ಪೂಜೆ, ಕಲಶಪೂಜೆ, ಮಹಾಪೂಜೆ, ಅದಿವಾಸ ಹೋಮ, ಅನುಜ್ಞ ಕಲಶಹೋಮ, ತಾ. ೮ರಂದು ಬೆಳಿಗ್ಗೆ ತತ್ಸಹೋಮ, ಕಾಲವೃದ್ಧಿ ಹೋಮ, ಪ್ರತಿಷ್ಠೆ ಹೋಮ, ಕಲಶಪೂಜೆ, ದ್ರವ್ಯ ಕಲಶಾಭಿಷೇಕ, ಅಷ್ಟಗಂಧ ಲೇಪನ, ಗೋಪೂಜೆ, ಮಹಾಪೂಜೆ, ಉತ್ಸವ ದೇವರ ಬಲಿ, ಫಲ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಶಂಕರನಾರಾಯಣ ವೈಲಾಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.