ಗೋಣಿಕೊಪ್ಪಲು, ಮೇ ೨: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವದೆಲ್ಲೆಡೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಉಕ್ರೇನ್, ರಷ್ಯಾ, ಅಮೇರಿಕಾ ಪ್ರಧಾನಿಗಳೂ ಯುದ್ಧದ ಬಗ್ಗೆ ಮೋದಿ ಸಲಹೆಯನ್ನು ಕೇಳುತ್ತಿದ್ದಾರೆ. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಮೋದಿ ಸರ್ಕಾರ ಕಠಿಣ ಕಾನೂನು ರೂಪಿಸಿದೆ. ಜಾತ್ಯಾತೀತವಾಗಿ ಮೋದಿ ಸರ್ಕಾರ ಭಾರತದಲ್ಲಿ ಹೊಸ ವಿಪ್ಲವವನ್ನೇ ಸೃಷ್ಠಿಸಿದೆ. ಕೊರೊನಾ ವ್ಯಾಕ್ಸಿನ್ ಅನ್ನು ಭಾರತದ ಎಲ್ಲ ಪ್ರಜೆಗಳಿಗೂ ಉಚಿತವಾಗಿ ಕಲ್ಪಿಸಿದ ಕೇಂದ್ರ ಸರ್ಕಾರ ಮಾನವೀಯ ದೃಷ್ಠಿಯಿಂದ ಶತ್ರುರಾಷ್ಟçಗಳಾದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನಕ್ಕೂ ಸರಬರಾಜು ಮಾಡುತ್ತಿದೆ ಎಂದು ಕೇರಳ ರಾಜ್ಯದ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಮ್ ರಾಜಶೇಖರನ್ ವ್ಯಾಖ್ಯಾನಿಸಿದರು.
ಗೋಣಿಕೊಪ್ಪಲು ರಾಧಾ ಟೂರಿಸ್ಟ್ ಹೋಮ್‌ನ ಸಭಾಂಗಣದಲ್ಲಿ ವೀರಾಜಪೇಟೆ ಓಬಿಸಿ ಮೋರ್ಚಾ ಹಾಗೂ ಗೋಣಿಕೊಪ್ಪಲು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಜರುಗಿದ ‘ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಈ ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಕಮ್ಯೂನಿಸ್ಟ್ ಸರ್ಕಾರದಿಂದ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ.ಮೋದಿಯ ವಿರುದ್ಧ ಅಸಭ್ಯ ನುಡಿಯಾಡುವ ಕಮ್ಯುನಿಸ್ಟ್ ಸರ್ಕಾರ ಇತ್ತೀಚೆಗೆ ಗುಜರಾತ್ ರಾಜ್ಯದ ಅಭಿವೃದ್ಧಿ ಬಗ್ಗೆ ಅಧ್ಯಯನಕ್ಕಾಗಿ ತನ್ನ ತಂಡವನ್ನು ಕಳುಹಿಸಿಕೊಟ್ಟಿತ್ತು. ಇತರೆ ರಾಜಕೀಯ ಪಕ್ಷಗಳ ನಾಯಕರು ಮೋದಿಯಿಂದ ಕಲಿಯುವದು ತುಂಬಾ ಇದೆ. ಕೇರಳದಲ್ಲಿ ಇತ್ತೀಚೆಗೆ ಸ್ತಿçà ಪೀಡನೆ, ಹಿಂಸಾಚಾರ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿವೆ. ಕೇರಳದಲ್ಲಿ ಲವ್ ಜಿಹಾದ್ ಹಾಗೂ ಹಲಾಲ್ ವಿರುದ್ಧವೂ ನಮ್ಮ ಪಕ್ಷ, ಹಿಂದೂ ಸಂಘಟನೆ ನಿರಂತರ ಹೋರಾಟ ಮಾಡುತ್ತಿದೆ ಎಂದರು.
ನರೇAದ್ರ ಮೋದಿ ಅವರು ಇತ್ತೀಚೆಗೆ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಿದ್ದರು. ನಾರಾಯಣ ಗುರು ಜಾತ್ಯಾತೀತ ಗುರುಗಳಾಗಿದ್ದು ಮನುಷ್ಯರಲ್ಲಿರುವದು ಒಂದೇ ಜಾತಿ, ಒಂದೇ ದೇವರೆಂದು ಪ್ರತಿಪಾದಿಸಿದ್ದರು. ಭಾರತದ ಆಧ್ಯಾತ್ಮಿಕ ಚೈತನ್ಯ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಸಾಮಾಜಿಕ ಕಳಕಳಿ ಇಂದು ದೇಶಕ್ಕೇ ಮಾದರಿಯಾಗಿದೆ. ಭಾರತದ ಹಳ್ಳಿ ಹಳ್ಳಿಗಳಲ್ಲಿಯೂ ವಿಕಸನವಾಗಲು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ ಕಾರಣವಾಗಿದೆ ಎಂದರು. ಭಾರತ ಆರ್ಥಿಕತೆಯಲ್ಲಿ ಇಂದು ವಿಶ್ವದಲ್ಲಿಯೇ ನಾಲ್ಕನೇ ರಾಷ್ಟçವಾಗಿದೆ. ವಿಶ್ವದಲ್ಲಿ ತಲೆ ಎತ್ತಿ ನಿಲ್ಲುವ ಶಕ್ತಿ ತುಂಬಿರುವದು ಕೇಂದ್ರದ ಬಿಜೆಪಿ ಸರ್ಕಾರ ಎಂದು ಹೇಳಿದ ಅವರು ಭಾರತೀಯರಿಗೆ ಜಾತ್ಯಾತೀತವಾಗಿ ಸರ್ಕಾರಿ ಸವಲತ್ತು ಹಾಗೂ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳದಲ್ಲಿ ಬಿಜೆಪಿ ಪಕ್ಷ ಸಂಕಷ್ಟದಲ್ಲಿದ್ದಾಗ ಸಂಘ ಪರಿವಾರವನ್ನು, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಕುಮ್ಮನಮ್ ರಾಜಶೇಖರ್‌ರವರು. ಅವರ ಆದರ್ಶವನ್ನು ನಾವು ಪಾಲನೆ ಮಾಡಬೇಕಾಗಿದೆ. ಓಬಿಸಿ ಘಟಕದಲ್ಲಿ ಎಲ್ಲ ಹಿಂದುಳಿದ ವರ್ಗಗಳ ಪಾತ್ರವೂ ಮಹತ್ವದ್ದು ಎಂದರು.
ಕಾAಗ್ರೆಸ್ ಪಕ್ಷವು ತನ್ನ ತಪುö್ಪ ನಿಲುವಿನಿಂದಾಗಿ ಭಾರತದಲ್ಲಿಯೇ ಮೂಲೆ ಗುಂಪಾಗಿದೆ. ಸ್ವಾತಂತ್ರ÷್ಯ ಬಂದ ನಂತರ ಕಾಂಗ್ರೆಸ್ ಸರ್ಕಾರ ಹಲವು ದಶಕಗಳು ಆಡಳಿತ ನಡೆಸಿತ್ತು. ಆಗ ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಿ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಿದ್ದವು. ಈಗ ಸನ್ನಿವೇಶ ಬದಲಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಇತರ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವದಾಗಿ ಟೀಕಿಸಿದರು.
ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು, ಕೇರಳದಲ್ಲಿ ಜೀವದ ಹಂಗು ತೊರೆದು ರಾಜಶೇಖರನ್ ಅವರು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಬೆಳೆಸಿದರು. ರಾಜಕಾರಣ ಇವತ್ತು ವಾಣಿಜ್ಯ ರಾಜಕಾರಣವಾಗಿ ಮಾರ್ಪಡುತ್ತಿರುವ ಸಂದರ್ಭ ದೇಶದ ಸ್ವಾಭಿಮಾನ ಹಾಗೂ ಹಿಂದುತ್ವಕ್ಕಾಗಿ ಹೋರಾಟ ಮಾಡಿರುವದಾಗಿ ಬಣ್ಣಿಸಿದರು.
ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ಕಾರ್ಯಕರ್ತರು ಪಕ್ಷ ನಿಷ್ಠೆ ಹಾಗೂ ಬದ್ಧತೆಯನ್ನು ಹೊಂದಿರಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ್ ರಘು ಮಾತನಾಡಿದರು.
ವೀರಾಜಪೇಟೆ ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕರ್ನಾಟಕ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಉಸ್ತುವಾರಿ ವಹಿಸಿರುವ ವಿಠಲ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಗಣೇಶ್, ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಕೊಡಗು ಎಸ್.ಎನ್.ಡಿ.ಪಿ.ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ವೀರಾಜಪೇಟೆ ಓಬಿಸಿ ಘಟಕದ ನವೀನ್ ಉತ್ತಯ್ಯ, ಜಿಲ್ಲಾ ಭಾಜಪಾ ಪ್ರಧಾನ ಕಾರ್ಯದರ್ಶಿ ಗುಮ್ಮಟೀರ ಕಿಲನ್‌ಗಣಪತಿ, ಗೋಣಿಕೊಪ್ಪಲು ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ಹಾಗೂ ರಂಜಿ, ವೀರಾಜಪೇಟೆ ತಾ. ಮಾಜಿ ಓಬಿಸಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್,ಶಿವA ದಿವಾಕರನ್ ಉಪಸ್ಥಿತರಿದ್ದರು.
ಸ್ವಾಗತ ಓಬಿಸಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಬಿ.ಎನ್. ಪ್ರಕಾಶ್,ಪ್ರಾರ್ಥನೆ ಸುಮಿ ಸುಬ್ಬಯ್ಯ ಹಾಗೂ ವೀರಾಜಪೇಟೆ ತಾಲೂಕು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ ವಂದಿಸಿದರು.