ಸುಂಟಿಕೊಪ್ಪ, ಏ. ೩೦: ಕೊಡಗಿನ ಬೆಳೆಗಾರರು ಕಾಫಿ, ಕರಿಮೆಣಸು, ಏಲಕ್ಕಿ ವಾಣಿಜ್ಯ ಬೆಳೆಗಳ ದರ ವ್ಯತ್ಯಯದಿಂದ ಕಂಗಾಲಾಗಿದ್ದ ಸಂದರ್ಭ ಪರ್ಯಾಯವಾಗಿ ಶುಂಠಿ ಬೆಳೆಯುತ್ತ ಮುಖ ಮಾಡಿದ್ದು, ಅದರಿಂದ ಅರ್ಥಿಕ ಚೇತರಿಕೆ ಕಂಡುಕೊAಡಿದ್ದರು.

ಶುಂಠಿ ಕೃಷಿಯಿಂದ ಉತ್ತಮಧಾರಣೆ ಲಭಿಸಿ ದಿಢೀರನೆ ಶ್ರೀಮಂತರಾದವರು ಇದ್ದಾರೆ. ಕೇರಳ ಮೂಲದ ವ್ಯಕ್ತಿಗಳು ಇಲ್ಲಿನ ಪಾಳುಬಿದ್ದ ಜಾಗ, ಗದ್ದೆಯನ್ನು ಲೀಸ್‌ಗೆ ಪಡೆದುಕೊಂಡು ಶುಂಠಿ ಬೆಳೆಸಿ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಕೊಡಗಿನ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ತಮಗೆ ಸೇರಿದ ಖಾಲಿ ಜಾಗದಲ್ಲಿ ಶುಠಿ ಕೃಷಿ, ಬೆಳೆಸಿ ಕಳೆದ ೩ವರ್ಷದಿಂದ ಶುಂಠಿಗೆ ಉತ್ತಮ ಧಾರಣೆ ಲಭಿಸದೆ ಕೈ ಸುಟ್ಟುಕೊಂಡಿದ್ದರು. ವಿಯಟ್ನಾಂ, ಆಸ್ಟೆçÃಲಿಯಾ, ಕೊರಿಯ, ಶ್ರೀಲಂಕಾದಲ್ಲಿ ಭಾರತದ ಶುಂಠಿಗೆ ಬಹುಬೇಡಿಕೆ ಇದೆ. ಆರ್ಯುವೇದಿಕ್ ಜಾಷಧಿಗಳ ತಯಾರಿಕೆಗೆ ಶುಂಠಿ ಅಗತ್ಯವಾಗಿದೆ. ಭಾರತದ ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶಗಳಲ್ಲಿ ದಕ್ಷಿಣ ಭಾರತದಲ್ಲಿ ಬೆಳೆದ ಶುಂಠಿಯನ್ನು ಖರೀದಿಸುತ್ತಾರೆ. ಇಲ್ಲಿನ ಮಣ್ಣಿನಲ್ಲಿ ಬೆಳೆದ ಶುಂಠಿ ಗುಣಮಟ್ಟದಿಂದ ಸತ್ವಯುತವಾಗಿರುತ್ತದೆ ಎಂದೂ ಬೇಡಿಕೆ ಹೆಚ್ಚಾಗಿದೆ.

ಈ ವರ್ಷ ೨೦೨೨-೨೩ನೇ ಸಾಲಿನಲ್ಲಿ ಶುಂಠಿಗೆ ಉತ್ತಮ ದರ ಲಭಿಸಬಹುದೆಂಬ ಆಶಾಭಾವನೆಯಿಂದ ಐಗೂರು, ಯಡವಾರೆ, ಹುದುಗೂರು, ಮಾದಾಪುರ, ಕೂಡಿಗೆ, ನಾಕೂರು-ಶಿರಂಗಾಲ, ೭ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಸುಂಟಿಕೊಪ್ಪ ವಿಭಾಗದಲ್ಲಿ ಮಧ್ಯಮ ವರ್ಗದ ಬೆಳೆಗಾರರು ಶುಂಠಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

- ಜಿ.ಕೆ. ಬಾಲಕೃಷ್ಣ