ಸಿದ್ದಾಪುರ, ಏ. ೩೦: ಒಂಟಿ ಸಲಗವೊಂದು ಕಾರಿನ ಮೇಲೆ ಧಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಬ್ಯಾಂಕ್ ಸಿಬ್ಬಂದಿ ಪಾರಾದ ಘಟನೆ ಮಾಲ್ದಾರೆ ಸಮೀಪದ ಘಟ್ಟದಳ್ಳದ ಬಳಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಹಾಗೂ ಗೋಣಿಕೊಪ್ಪಲುವಿನ ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ ಯಾಗಿರುವ ಜಿ.ವಿ ಸುಬ್ರಮಣಿ ಎಂಬವರು ತಮ್ಮ ಕಾರಿನಲ್ಲಿ ಬೆಳಿಗ್ಗೆ ಸಿದ್ದಾಪುರ ಮಾರ್ಗವಾಗಿ ಗೋಣಿಕೊಪ್ಪಲಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು.

ಮಾಲ್ದಾರೆ ಸಮೀಪದ ಘಟ್ಟದಳ್ಳ ಬಳಿಯ ತಮಿಳು ಶಾಲೆಯ ಸಮೀಪಕ್ಕೆ ತಲುಪುತ್ತಿದ್ದಂತೆ ಕಾಫಿ ತೋಟದ ಒಳಗಿನಿಂದ ಒಂಟಿ ಸಲಗವೊಂದು ಹಠಾತ್ತನೆ ಮುಖ್ಯ ರಸ್ತೆಯ ಮೂಲಕ ಬಂದಿದೆ. ಸಲಗವನ್ನು ಕಂಡ ಸುಬ್ರಮಣಿ ಅವರು ಅಪಾಯ ಅರಿತು ಕಾರನ್ನು ಹಿಂದಕ್ಕೆ ತೆಗೆದರು.