ಗೋಣಿಕೊಪ್ಪ ವರದಿ, ಏ. ೩೦: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪೊರುಕೊಂಡ ಕ್ರಿಕೆಟ್ ನಮ್ಮೆಗೆ ತಾ. ೧ ರಂದು (ಇಂದು) ಚಾಲನೆ ನೀಡಲಾಗುತ್ತದೆ. ತಾ. ೧೮ ರವರೆಗೆ ನಡೆಯಲಿರುವ ನಮ್ಮೆಯಲ್ಲಿ ೧೯೨ ತಂಡಗಳು ಪೈಪೋಟಿಯಲ್ಲಿವೆ.

೨೦ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿದ್ದು, ಅಮ್ಮತ್ತಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರತ್ಯೇಕವಾಗಿ ಪಂದ್ಯಗಳು ನಡೆಯಲಿವೆ. ಬೆಳಿಗ್ಗೆ ೯.೩೦ ಗಂಟೆಗೆ ಸೌತ್ ಕೂರ್ಗ್ ಮತ್ತು ನಾರ್ತ್ ಕೂರ್ಗ್ ತಂಡಗಳ ನಡುವೆ ಲೆದರ್‌ಬಾಲ್ ಕ್ರಿಕೆಟ್ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ. ನಂತರ, ಟೂರ್ನಿಯ ೪ ಪಂದ್ಯಗಳು ನಡೆಯುತ್ತವೆ.

ಭಾನುವಾರ ಬೆಳಿಗ್ಗೆ ೧೦.೩೦ ಗಂಟೆಗೆ ಕರ್ನಾಟಕ ವಿದ್ಯುತ್ ನಿಗಮ ಮಹಾಪ್ರಬಂಧಕ ಹಾಗೂ ಪದ ನಿಮಿತ್ತ ಹೆಚ್ಚುವರಿ ಕಾರ್ಯದರ್ಶಿ ತೀತೀರ ರೋಶನ್ ಅಪ್ಪಚ್ಚು ಪಂದ್ಯಾಟ ಉದ್ಘಾಟಿಸಲಿದ್ದಾರೆ. ಕೊಡವ ಕ್ರಿಕೆಟ್ ಅಕಾಡೆಮಿ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಶಾಸಕ ಕೊಂಬಾರನ ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಎಂಎಲ್‌ಸಿ ಮಂಡೇಪAಡ ಸುಜಾ ಕುಶಾಲಪ್ಪ, ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ, ಉದ್ಯಮಿ ಚೇರಂಡ ಕಿಶನ್ ಮಾದಪ್ಪ, ಕಾರ್ಮಾಡು ಗ್ರಾ.ಪಂ. ಸದಸ್ಯ ಚೋವಂಡ ನಾಚಪ್ಪ, ಕೊಡಗು ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಕಂಡ್ರತAಡ ಸುಬ್ಬಯ್ಯ, ಮುಖ್ಯಶಿಕ್ಷಕ ದೊಡ್ಡ ತಮ್ಮಯ್ಯ, ಟೂರ್ನಿ ನಿರ್ದೇಶಕ ನೆಲ್ಲಚಂಡ ಯತೀಶ್ ನಾಚಪ್ಪ, ಪೊರುಕೊಂಡ ಕುಟುಂಬದ ಪಟ್ಟೆದಾರ ಪಿ.ಎಂ. ಜೋಯಪ್ಪ, ಅಧ್ಯಕ್ಷ ಪಿ.ಯು. ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.