ಜಿಲ್ಲಾ ಹಾಕಿ ಲೀಗ್

ಮಡಿಕೇರಿ, ಏ. ೩೦: ಹಾಕಿ ಕೂರ್ಗ್ ವತಿಯಿಂದ ಮೇ ೧ ರಿಂದ (ಇಂದಿನಿAದ) ಪೊನ್ನಂಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಜಿಲ್ಲಾ ಹಾಕಿ ಲೀಗ್ ಪಂದ್ಯಾವಳಿ ಆರಂಭಗೊಳ್ಳಲಿದೆ. ವಾರ್ಷಿಕವಾಗಿ ನಡೆಯುತ್ತಿದ್ದ ಜಿಲ್ಲಾ ಹಾಕಿ ಲೀಗ್ ಕೊರೊನಾ ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷ ನಡೆದಿರಲಿಲ್ಲ. ಇದೀಗ ಹಾಕಿ ಕೂರ್ಗ್ ಇದಕ್ಕೆ ಮರು ಚಾಲನೆ ನೀಡುತ್ತಿದೆ. ಪ್ರಸಕ್ತ ವರ್ಷದ ಹಾಕಿ ಲೀಗ್‌ನಲ್ಲಿ ಜಿಲ್ಲೆಯ ವಿವಿಧೆಡೆಗಳ ೨೫ ಹಾಕಿ ಕ್ಲಬ್ ತಂಡಗಳು ಪಾಲ್ಗೊಳ್ಳುತ್ತಿವೆ. ಮೇ ೧ ರಿಂದ ಬೆಳಿಗ್ಗೆ ಸರಳವಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಾಕಿ ಕೂರ್ಗ್ನ ಪದಾಧಿಕಾರಿಗಳು, ಹಾಕಿ ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ.